ಹೊನ್ನಾಳಿ, ಫೆ.12- ಕಾರು ಮತ್ತು ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಅರಕೆರೆ ಎ.ಕೆ. ಕಾಲೋನಿ ಬಳಿ ಭಾನುವಾರ ಸಂಭವಿಸಿದೆ. ಅರಕೆರೆ ಎಸ್.ಜಿ. ಮಧುಗೌಡ ಗಾಯಗೊಂಡಿರುವ ಕಾರು ಚಾಲಕ.
ದಾವಣಗೆರೆಯಲ್ಲಿ ಭಾನುವಾರ ನಡೆದ ವಿವಾಹ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಅರಕೆರೆ ಗ್ರಾಮಕ್ಕೆ ವಾಪಸ್ಸಾಗುವ ಸಂದರ್ಭದಲ್ಲಿ ಹರಿಹರದ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಅರಕೆರೆ ಎ.ಕೆ. ಕಾಲೋನಿ ಬಳಿ ಮಧುಗೌಡ ಪಯಣಿಸುತ್ತಿದ್ದ ಕಾರ್‍ಗೆ ಡಿಕ್ಕಿ ಹೊಡೆದಿದೆ. ಏರ್ ಬ್ಯಾಗ್‍ಗಳು ತೆರೆದುಕೊಂಡದ್ದರಿಂದ ಕಾರ್‍ನಲ್ಲಿದ್ದವರಿಗೆ ಅಪಾಯ ಆಗಿಲ್ಲ.