ಹರಪನಹಳ್ಳಿ, ಫೆ.10- ಜೆ.ಇ.ಇ ಪರೀಕ್ಷೆಯಲ್ಲಿ ಹರಪನಹಳ್ಳಿಯ ವಿದ್ಯಾರ್ಥಿ ಜೆ.ವಿ. ಪ್ರಜ್ವಲ್ ಶೇ 96.21% ಅಂಕ ಪಡೆದಿದ್ದಾನೆ.
ಅಡುಗೆ ವೆಂಕಟೇಶ್ ಇವರ ಮಗನಾಗಿರುವ ಪ್ರಜ್ವಲ್ ಸಾಧನೆಗೆ ಪಟ್ಟಣದ ವಿಪ್ರ ಸಮಾಜದ ಅಧ್ಯಕ್ಷ ಯು.ರಾಘವೇಂದ್ರ ಪ್ರಸಾದ್, ಮುಖಂಡರುಗಳಾದ ಶ್ಯಾಮಸುಂದರ ಭಟ್, ಸಿ.ಚಂದ್ರಶೇಖರ್ ಭಟ್, ಸಿ.ಎಲ್.ಭಟ್, ಬಿ.ಕೃಷ್ಣಮೂರ್ತಿ, ಕಟ್ಟಿ ರಂಗನಾಥ, ಬಿ.ನಾಗರಾಜ್ ಭಟ್, ಬಿ.ಶ್ರೀನಿಧಿ ಡಾ|| ಕಟ್ಟಿ ಹರ್ಷ, ದಂಡಿನ ಹರೀಶ್, ರಾಮ್ ಭಟ್ ಅವರುಗಳು ಶುಭ ಹಾರೈಸಿದ್ದಾರೆ.