ಬಸವಣ್ಣನವರ ಪುತ್ಥಳಿ ತೆರವಿಗೆ ಕರವೇ ಆಕ್ರೋಶ

ದಾವಣಗೆರೆ, ಫೆ. 10- ಅಭಿವೃದ್ಧಿ ನೆಪದಲ್ಲಿ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆಯು ವಿಶ್ವಗುರು ಬಸವಣ್ಣನವರ ಪುತ್ಥಳಿ ತೆರವಿಗೆ ಮುಂದಾಗಿರುವುದನ್ನು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ.
ಯಾವುದೇ ದಾರ್ಶನಿಕರ ಹೆಸರುಗ ಳನ್ನು ಪ್ರಮುಖ ವೃತ್ತ, ರಸ್ತೆಗಳಿಗೆ ಇಡುವುದು ಮುಂದಿನ ಯುವ ಪೀಳಿಗೆೆಗೆ ದಾರ್ಶನಿಕರ ಪರಿಚಯ, ಸಾಧನೆ ಬಗ್ಗೆ ತಿಳಿದುಕೊಳ್ಳ ಲೆಂದು. ಮಹಾನಗರ ಪಾಲಿಕಯವರು ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕಾಗಿತ್ತು.
ಧಾರವಾಡ ಸಂಸದರ ಮನವೊಲಿಸಿರು ವುದನ್ನು ನೋಡಿದರೆ, ಈ ಪುತ್ಥಳಿ ತೆರವು ಗೊಳಿಸುವಲ್ಲಿ ಅವರದೂ ಪಾತ್ರ ಇದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ತಿಳಿಸಿದ್ದಾರೆ. ತಕ್ಷಣ ಸಂಸ ದರು ತೆರವುಗೊಳಿಸಿರುವ ಪುತ್ಥಳಿಯನ್ನು ಮರು ಪ್ರತಿಷ್ಠಾಪಿಸಬೇಕು ಎಂದು ವೇದಿಕೆ ಅಧ್ಯಕ್ಷ ರಾಮೇಗೌಡ ಒತ್ತಾಯಿಸಿದ್ದಾರೆ.

error: Content is protected !!