ಮೈಲಾರದಲ್ಲಿ ನಾಡಿದ್ದು ಶ್ರೀ ಏಳುಕೋಟಿ ವಸತಿ ಶಾಲೆ ಉದ್ಘಾಟನೆ

ದಾವಣಗೆರೆ, ಫೆ.1- ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕು ಮೈಲಾರದಲ್ಲಿ ಶ್ರೀ ಏಳುಕೋಟಿ ವಸತಿ ಶಾಲೆ, ಶ್ರೀ ಗಂಗ ಮಾಳಮ್ಮ ದೇವಿ ಯಾತ್ರಿ ನಿವಾಸ ಉದ್ಘಾಟನಾ ಸಮಾರಂಭ ಇದೇ ಇದೇ ದಿನಾಂಕ 4 ಹಾಗೂ 5ರಂದು ನಡೆಯಲಿದೆ ಎಂದು ಹಾಲುಮತ ಮಹಾಸಭಾದ ಕಾರ್ಯಾಧ್ಯಕ್ಷ ದೀಟೂರ್ ಚಂದ್ರು ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 4ರ ಶನಿವಾರ ಶ್ರೀ ಏಳುಕೋಟಿ ವಸತಿ ಶಾಲಾ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಹೈದರಾಬಾದ್ ವ್ಯಾದಿ ನಿವಾರಣಾ ಶ್ರಮದ ಡಾ.ಸಾಯಿಕುಮಾರ್ ಬಾಬಾ, ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ವಹಿಸಲಿದ್ದಾರೆ.

ವಸತಿ ಶಾಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಲಿ ದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಸನ್ಮಾನಿಸಲಾ ಗುವುದು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಸಚಿವರು, ಸಂಸದರು, ಶಾಸಕರುಗಳು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ದಿನಾಂಕ 5ರ ಭಾನುವಾರ ಶ್ರೀ ಗಂಗಮಾಳಮ್ಮ ದೇವಿ ಯಾತ್ರಿ ನಿವಾಸವನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಶಾಸಕ ಬಂಡೆಪ್ಪ ಕಾಶೆಂಪುರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಹಾಲುಮತ ಮ ಹಾಸಭಾದ ಜಿಲ್ಲಾಧ್ಯಕ್ಷ ಸಿ.ವೀರಣ್ಣ, ಉಪಾಧ್ಯಕ್ಷ ಸಲ್ಲಳ್ಳಿ ಹನುಮಂತಪ್ಪ, ಕಾರ್ಯದರ್ಶಿ ಎಸ್.ಎಂ. ಸಿದ್ದಲಿಂಗಪ್ಪ, ಕಛೇರಿ ಕಾರ್ಯದರ್ಶಿ ಎನ್.ಹೆಚ್. ರವೀಂದ್ರಬಾಬು, ಸಂಘಟನಾ ಕಾರ್ಯದರ್ಶಿ ಎಸ್.ನಾಗರಾಜ್,  ತಾಲ್ಲೂಕು ಅಧ್ಯಕ್ಷ ಮಹೇಂದ್ರಕುಮಾರ್, ನಿಟುವಳ್ಳಿ ಪ್ರವೀಣ್ ಉಪಸ್ಥಿತರಿದ್ದರು.

error: Content is protected !!