ದಾವಣಗೆರೆ, ಫೆ.2- ನಗರದ ಪೊಲೀಸ್ ವೃತ್ತ ನಿರೀಕ್ಷಕ ಆರ್.ಪಿ.ಅನಿಲ್ ಅವರಿಗೆ ರಾಷ್ಟ್ರಪತಿ ಪದಕದ ಗೌರವ ಸಂದಿದೆೆೆ. ಅನಿಲ್, ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಸಾಹಿತಿ ಎಂ.ಎಂ. ಕಲ್ಬುರ್ಗಿ ಅವರ ಕೊಲೆ ಪ್ರಕರಣ ಭೇದಿಸಿದ ಪ್ರಮುಖ ತಂಡದ ಸದಸ್ಯರಾಗಿದ್ದರು. ನಾನಾ ಪ್ರಕರಣಗಳನ್ನು ಭೇದಿಸಿದ ಹಿನ್ನೆಲೆಯಲ್ಲಿ 62 ಪ್ರಕರಣಗಳಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ, 31 ಕೇಸ್‌ಗೆ ಸಂಬಂಧಿಸಿದಂತೆ 1,33,450/- ರೂ.ಗಳ ಬಹುಮಾನವಾಗಿ ಪಡೆದಿರುತ್ತಾರೆ.
January 23, 2025