ದಾವಣಗೆರೆ, ಜ.30- ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಗೆ ದಾವಣಗೆರೆ ಜಿಲ್ಲೆಯ ಗೋವಿಂದಸ್ವಾಮಿ ಮತ್ತು ಶಾಮನೂರು ಟಿ.ಬಸವರಾಜ್ ನೇಮಕಗೊಂಡಿದ್ದಾರೆ. ಕರ್ನಾ ಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಸಂಯೋಜಕರನ್ನಾಗಿ ಪಿ.ಸಿ.ಗೋವಿಂದಸ್ವಾಮಿ ಹಾಗೂ ದಾವಣಗೆರೆ ಜಿಲ್ಲಾಧ್ಯಕ್ಷರನ್ನಾಗಿ ಶಾಮನೂರು ಟಿ.ಬಸವರಾಜ್ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ನೇಮಕ ಮಾಡಿದ್ದಾರೆ.
January 20, 2025