ದಾವಣಗೆರೆ,ಜ.29- ಸ್ಥಳೀಯ ದೈವಜ್ಞ ಸಮಾಜ ಸಂಘದ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಪ್ರಶಾಂತ್ ವಿಶ್ವನಾಥ್ ವೆರ್ಣೇಕರ್ (ಹೆಗಡೆ) ಅವರ ಗುಂಪಿಗೆ ಅತ್ಯಧಿಕ ಸ್ಥಾನಗಳು ಲಭಿಸಿವೆ.
ದೈವಜ್ಞ ಸಮಾಜ ಸಂಘದ ಒಟ್ಟು 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರೂ ಆಗಿರುವ ಪ್ರಶಾಂತ್ ವಿಶ್ವನಾಥ್ ವೆರ್ಣೇಕರ್ ಅವರ ಗುಂಪಿಗೆ 13 ಸ್ಥಾನಗಳು ದೊರೆತಿವೆ.
ಮತ್ತೊಂದು, ಸಾಮಾಜಿಕ ಸೇವಾ ಕಾರ್ಯಕರ್ತ ವಾಸುದೇವ ಎಲ್.ರಾಯ್ಕರ್ ಅವರ ಗುಂಪಿಗೆ 2 ಸ್ಥಾನಗಳು ಲಭಿಸಿವೆ. ಒಟ್ಟು 15 ಸ್ಥಾನಗಳಿಗೆ 37 ಜನರು ಸ್ಪರ್ಧೆ ಮಾಡಿದ್ದರು. ಪ್ರಶಾಂತ್ ವಿಶ್ವನಾಥ್ ವೆರ್ಣೇಕರ್ ಅವರು ಅತ್ಯಧಿಕ 1469 ಮತಗಳನ್ನು ಪಡೆಯುವುದರ ಮೂಲಕ ಮತ ಗಳಿಕೆಯಲ್ಲೂ ಪ್ರಥಮ ಸ್ಥಾನ ಗಳಿಸಿದ್ದಾರೆ. ಅವರ ಗುಂಪಿನ ಸತೀಶ್ ಎಸ್. ಸಾನು -ಮುಂಡಗೋಡ (1297), ಸಚಿನ್ ಎಸ್. ವೆರ್ಣೇಕರ್ (1213), ರಾಜೀವ್ ವಿ. ವೆರ್ಣೇಕರ್ – ಪಿಬಿವಿ (1195), ಉಮೇಶ್ ನಾರಾಯಣ ಪುರುಷನ್ (1072), ಸುಬ್ಬರಾವ್ ಡಿ.ಎನ್. -ಕುಂಬಳೂರು ಸುಬ್ಬಣ್ಣ (981), ರಾಜೇಶ್ ಪಿ.ರೇವಣಕರ್ ನಲ್ಲೂರು (973), ರಾಘವೇಂದ್ರ ಸುರೇಶ್ ಕುರ್ಡೇಕರ್ – ಅವರ್ಸಾ (945), ನಾಗರಾಜ್ ಇ. ಅಣಜಿ ಕುಡ್ತರಕರ್ (942), ರಾಘವೆಂದ್ರ ನರಸಿಂಹಪ್ಪ ದಿವಾಕರ್ – ಹಡಗಲಿ (937), ಶಂಕರ್ ನಾಗಪ್ಪ ವಿಠಲ್‌ಕರ್ – ಕಚವಿ (927), ಮಂಜುನಾಥ ವಿ ಕುಡ್ತರಕರ್ – ಗಾಲಿ ಮಂಜಣ್ಣ (916), ಸಾಯಿ ಪ್ರಕಾಶ್ ಸುಪರ್‌ರಾವ್ ವೆರ್ಣೇಕರ್ (906), ಪಾಂಡುರಂಗ ಶ್ರೀನಿವಾಸ್ ಭಟ್ ಆವಾಜಿ (891), ಮಂಜುನಾಥ ಆರ್. ಕುರ್ಡೇಕರ್ – ಹರಿಹರ ರಾಮಣ್ಣ (843) ಅವರುಗಳು ಆಯ್ಕೆಯಾಗಿದ್ದಾರೆ.
ಅರುಣ್ ಗಣಪತಿ ರೇವಣಕರ್ (754), ಅಶೋಕ್ ಡಿ. ಜನ್ನು (707), ಚಂದ್ರಹಾಸ್ ವಿ. ಕುರ್ಡೇಕರ್ (651), ದೀಪಕ್ ಎನ್. ಶೇಟ್ (793), ಪ್ರಕಾಸ್ ಎಲ್.ದೈವಜ್ಞ (558), ಪ್ರಕಾಶ್ ಕೆ. ಶೇಜವಾಡಕರ್ (504), ಪ್ರಕಾಶ್ ವಾಸುದೇವ ಪಾಲನಕರ್ (222), ಪ್ರಕಾಶ್ ವಿ. ರಾಯ್ಕರ್ (176), ಮಂಜುನಾಥ ಎಂ. ಅಣ್ವೇಕರ್ (112), ಮಂಜುನಾಥ್ ರಾಮರಾವ್ ವೆರ್ಣೇಕರ್ (269), ಮನೋಹರ ಆರ್. ವೆರ್ಣೇಕರ್ (329), ರಾಜೇಶ್ ಆರ್. ರೇವಣಕರ್ (403), ವಾಸುದೇವ ಎಲ್. ರಾಯ್ಕರ್ (753), ವಿಠಲ್ ಗಣಪತಿ ಭಟ್ ಆವಾಜಿ (720), ವಿಶ್ವನಾಥ ಆರ್. ರಾಯ್ಕರ್ (297), ಶೈಲೇಂದ್ರ ಎಂ. ಕೊಲ್ವೇಕರ್ (366), ಸತ್ಯನಾರಾಯಣ ಆರ್. ರಾಯ್ಕರ್ (709), ಸಂಜಯ್ ಆರ್. ರೇವಣಕರ್ (441), ಸುಬ್ರಹ್ಮಣ್ಯ ದೇವದಾಸ್ ಶೇಟ್ (476), ಸೂರಜ್ ರೇವಣಕರ್ (802), ಸ್ಮಿತಾ ಪ್ರಸನ್ನ ವೆರ್ಣೇಕರ್ (523), ಹೆಚ್.ಜಿ. ಹನುಮಂತರಾವ್ ಪಾಲನಕರ್ (421) ಅವರುಗಳು ಪರಾಭವಗೊಂಡಿದ್ದಾರೆ.