ಹರಿಹರ, ಜ. 25 – ನಗರದ ಐತಿಹಾಸಿಕ ಪ್ರಸಿದ್ಧ ಶ್ರೀ ಹರಿಹರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ಫೆಬ್ರವರಿ 5 ರ ಭಾನುವಾರ ಬೆಳಗ್ಗೆ 10-50 ಗಂಟೆಗೆ ಪೂಜಾ ವಿಧಿ-ವಿಧಾನಗಳೊಂದಿಗೆ ನೆರವೇರಲಿದೆ ಎಂದು ತಹಶೀಲ್ದಾರ್ ಎಂ.ಬಿ. ಅಶ್ವತ್ಥ್ ತಿಳಿಸಿದರು.
ನಗರದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತ ನಾಡಿ, ಜನವರಿ 31 ಮಂಗಳವಾರದಿಂದ ಫೆಬ್ರವರಿ 6 ರ ಸೋಮವಾರದವರೆಗೆ ಪೂಜಾ ಕಾರ್ಯಗಳನ್ನು ಮಾಡ ಲಾಗುತ್ತದೆ. ಪ್ರತಿನಿತ್ಯ ಬೆಳಿಗ್ಗೆ ಗಣಪತಿ ಪೂಜೆ, ರುದ್ರಾಭಿ ಷೇಕ, ಅಲಂಕಾರ, ಹೋಮ ಹವನಾದಿಗಳು ನಡೆಯು ತ್ತವೆ ಎಂದರು. ಒಂದೊಂದು ದಿನ ಸಂಜೆ ಪಂಚೋಪ ಚಾರ ಪೂಜಾ ಬಲಿದಾನ ವೃಷಭೋತ್ಸವ, ಗರುಡೋ ತ್ಸವ, ಹನುಮೋತ್ಸವ, ಕಲ್ಯಾಣೋತ್ಸವ, ಗಜೋತ್ಸವಗಳ ಮೆರವಣಿಗೆ ನಡೆದು ನಿತ್ಯ ಸೇವಾದಿಗಳು ನಡೆಯುತ್ತವೆ.
ದಿನಾಂಕ 5 ರಂದು ಭಾನುವಾರ ಬೆಳಗ್ಗೆ ಹೋಮ ಹಾಗೂ ಮಹಾ ಪೂರ್ಣಾಹುತಿ, ಬೆಳಗ್ಗೆ 10-50 ಕ್ಕೆ ಶ್ರೀ ಹರಿಹರೇಶ್ವರಸ್ವಾಮಿಯ ರಥ ಪೂಜಾ ಬಲಿದಾನ ರಥಾರೋಹಣ ಮತ್ತು ಮಹಾಮಂಗಳಾರತಿ ನಡೆಯಲಿದೆ. ಪೂಜಾ ಕಾರ್ಯಗಳು ನಾರಾಯಣ ಜೋಯಿಸರ ನೇತೃತ್ವದಲ್ಲಿ ನಡೆಯಲಿವೆ.
ದಿನಾಂಕ 6 ರ ಸೋಮವಾರ ಬೆಳಗ್ಗೆ ಪೂಜಾ ಕಾರ್ಯಗಳು ನಡೆ ಯಲಿವೆ. ಸಂಜೆ 6-30 ಕ್ಕೆ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಹೆಚ್.ಎಲ್. ಆನಂದ್, ಕಾರ್ಯದರ್ಶಿ ವಾರಿಜಾ ಹೆಚ್. ವೆಂಕಟೇಶ, ಶಿರಸ್ತೇದಾರ ಜಿ. ಕಿರಣ್ ಕುಮಾರ್, ಮುಜರಾಯಿ ನಿರ್ವಾಹಕರಾದ ಸಂಗೀತ ಕೆ. ಜೋಷಿ, ಆರ್.ಐ. ಎಂ. ಮಂಜುನಾಥ್, ಗ್ರಾಮ ಆಡಳಿತಾಧಿಕಾರಿ ಹೆಚ್.ಜಿ.ಹೇಮಂತ್ಕುಮಾರ್, ಮಾಜೇನಹಳ್ಳಿ ಶಾನಭೋಗ ಹೆಚ್.ಗಿರೀಶ್, ಕಸಬಾ ಶಾನಭೋಗ ಹೆಚ್.ವಿ. ಹರಿಶಂಕರ್, ಮಾಜೇನಹಳ್ಳಿ ಪಾಟೀಲರು ಜಿ.ಎಸ್. ಚೆನ್ನಬಸಪ್ಪ, ಕಸಬಾ ಪಾಟೀಲರು ಜಿ.ಎಂ. ಲಿಂಗರಾಜ್ ಪಾಟೀಲ್, ಅರ್ಚಕ ಶ್ರೀನಿವಾಸಮೂರ್ತಿ, ಗುರುಪ್ರಸಾದ್ ಮತ್ತಿತರರು ಹಾಜರಿದ್ದರು.