ರೈತರನ್ನು ಸ್ವತಂತ್ರರನ್ನಾಗಿಸುವಲ್ಲಿ ನೂತನ ಕೃಷಿ ಕಾಯ್ದೆಗಳು ಸಹಕಾರಿ : ಸಂಸದ ಸಿದ್ದೇಶ್ವರ

ದಾವಣಗೆರೆ, ಸೆ.28- ರೈತರನ್ನು ಸ್ವಾವಲಂಭಿ ಗಳನ್ನಾಗಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರು ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಇವುಗಳು ರೈತರನ್ನು ಸ್ವತಂತ್ರರನ್ನಾಗಿಸಲು ಸಹಕಾರಿಯಾಗಿವೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.

ಕೃಷಿ ಕಲ್ಯಾಣ ಸಚಿವಾಲಯ ದೊಂದಿಗೆ ಹಮ್ಮಿಕೊಂಡಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಹೊಸ ಮಸೂದೆಗಳನ್ನು ರೈತರು ತಾವು ಬೆಳೆದ ಬೆಳೆಗಳನ್ನು ಇಷ್ಟಪಟ್ಟ ವರ್ತಕರಿಗೆ ಮಾರಬಹುದು ಎಂದರು. ರೈತರು ಇಚ್ಚಿಸಿದರೆ ಕೃಷಿ ಮಾರುಕಟ್ಟೆಯ ಒಳಗೆ ಅಥವಾ ಕೃಷಿ ಮಾರುಕಟ್ಟೆ ಹೊರಗೆ ಅವರೇ ನಿಗದಿಪಡಿಸಿದ ಬೆಲೆಗೆ ಮಾರಬಹುದಾಗಿದೆ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದರು.

ಮುಂಬರುವ ದಿನಗಳಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ರೈತರ ಮನೆ ಬಾಗಿಲಿಗೆ ತೆರಳಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಸೂದೆಗಳ ಕುರಿತು ರೈತರಿಗೆ ವಾಸ್ತವ ಮನವರಿಕೆ ಮಾಡುವ ಸಲಹೆ ನೀಡಿದರು. ಕೇಂದ್ರದ ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಸೂಕ್ತ ಮಾರ್ಗದರ್ಶನ ನೀಡಿದರು.

ಸಚಿವರಾದ ನರೇಂದ್ರ ಸಿಂಗ್‌ ತೋಮರ್, ಡಿ.ವಿ. ಸದಾನಂದಗೌಡ, ನಿರ್ಮಲಾ ಸೀತಾರಾಮನ್‌, ರವಿಶಂಕರ್‌ ಪ್ರಸಾದ್ ಹಾಗೂ ಲೋಕಸಭಾ ಸದಸ್ಯರು ಭಾಗವಹಿಸಿದ್ದರು.

error: Content is protected !!