ಕನ್ನಡಕ ವಿತರಣೆಯೊಂದಿಗೆ ಮೋದಿ ಜನ್ಮದಿನಾಚರಣೆ

ರಾಣೇಬೆನ್ನೂರು, ಸೆ.17- ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಶಾಸಕ ಅರುಣಕುಮಾರ್ ಪೂಜಾರ ಆಚರಿಸಿದರು. 

ನಗರದ ಉರ್ದು ಹೈಸ್ಕೂಲ್ ಮೈದಾನದಲ್ಲಿ ಅಲ್ಪಸಂಖ್ಯಾತ ಮೋರ್ಚಾದಿಂದ ಸ್ವಚ್ಛತೆ, ಬಿಜೆಪಿ ಯುವ ಮೋರ್ಚಾದಿಂದ ಕಚೇರಿಯಲ್ಲಿ ರಕ್ತ ದಾನ, ಮಹಿಳಾ ಮೋರ್ಚಾದಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ.

ಮೆಡ್ಲೇರಿಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ, ಹರಿಜನ ಕಾಲೋನಿಯಲ್ಲಿ  ಮತ್ತು ಉರ್ದು ಮೈದಾನ ದಲ್ಲಿ ಸ್ವಚ್ಛತೆ ಕಾರ್ಯಕ್ರಮ, ಅರೆಮಲ್ಲಾಪುರದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಪೂಜೆ, ರೋಗಿಗಳಿಗೆ ಹಣ್ಣು ಮತ್ತು ಕನ್ನಡಕ ವಿತರಣೆ, ನಗರದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಗಿಡ ನೆಡುವ, ಹರಳಯ್ಯ ನಗರದಲ್ಲಿ ಹಾಗೂ ವಾಗೀಶ ನಗರದಲ್ಲಿ ಸ್ವಚ್ಛತೆ ಮತ್ತು ಕನ್ನಡಕ ವಿತರಣೆ ಹಲಗೇರಿ, ಕೂಲಿ, ಕಮದೋಡ ಗ್ರಾಮಗಳಲ್ಲಿ ಸಾರ್ವಜನಿಕ ಸಭೆ ನಡೆಸುವುದರ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.

ವಿವಿಧ ಕಾರ್ಯಕ್ರಮಗಳಲ್ಲಿ ಮುಖಂಡರುಗಳಾದ  ಜಿ.ಜಿ. ಹೊಟ್ಟಿಗೌಡ್ರ, ಭಾರತಿ ಜಂಬಗಿ, ಚನ್ನಮ್ಮ ಗುರುಪಾದೇವರ ಮಠ, ಸಂತೋಷ್ ಪಾಟೀಲ್, ಬಸವರಾಜ ಕೇಲಗಾರ, ಅನ್ನಪೂರ್ಣ ತಿಳುವಳ್ಳಿ, ಬಸವರಾಜ ಹುಲ್ಲತ್ತಿ, ರಾಜು ಅಡ್ಮನಿ, ವೀರಭದ್ರಪ್ಪ ಮೋಟಗಿ, ಸಿದ್ದಯ್ಯ ಹಿರೇಮಠ ವಿವಿಧ ವಿಭಾಗಗಳ  ಪದಾಧಿಕಾರಿಗಳು ಪಾಲ್ಗೊಂಡಿದ್ದರು.

error: Content is protected !!