ಜಗಳೂರು, ಸೆ.2 – ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಏರ್ ವಿಷಲ್ ಟ್ಯಾಂಕ್ ನಿರ್ಮಾಣ ಮಾಡಬೇಕು ಎಂದು ಭದ್ರಾ ಮೇಲ್ದಂಡೆ ಯೋಜನೆ ತಜ್ಞರ ಸಮಿತಿ ಸದಸ್ಯ ಕೆ.ಬಿ.ಕಲ್ಲೇರುದ್ರೇಶ್ ಒತ್ತಾಯಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪೈಪ್ ಲೈನ್ ಮಾರ್ಗ ಮಧ್ಯೆ 3-4 ಕಿಲೋ ಮೀಟರ್ ಒಂದರಂತೆ ಏರ್ ವಿಷಲ್ ಟ್ಯಾಂಕ್ ನಿರ್ಮಾಣ ಮಾಡಿದರೆ ವಿದ್ಯುತ್ ನಿಲುಗಡೆ ಆದಾಗ ನೀರು ಟ್ಯಾಂಕ್ ಗೆ ಸಂಗ್ರಹವಾಗಿ ಉಳಿತಾಯವಾಗಲಿದೆ ಎಂದರು. ಇದಕ್ಕಾಗಿ 15 ರಿಂದ 20 ಕೋಟಿ ರೂ. ವೆಚ್ಚವಾಗಲಿದೆ. ಯೋಜನೆಯ ಡಿ.ಪಿ.ಆರ್ ನಲ್ಲಿ ಏರ್ ವಿಷಲ್‌ಗೆ ಮಾತ್ರ ಅವಕಾಶವಿದೆ. ಇದರ ಜೊತೆಗೆ ಟ್ಯಾಂಕನ್ನು ಹರಿಹರ, ಚಟ್ನಹಳ್ಳಿ ಸಮೀಪಗಳಲ್ಲಿ ನಿರ್ಮಿಸುವಂತೆ ನೀರಾವರಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು. ಭದ್ರಾ ಮೇಲ್ದಂಡೆ ಯೋಜನೆ 2.4 ಟಿ.ಎಂ.ಸಿ. ಜಗಳೂರು ಶಾಖಾ ಕಾಲುವೆಗೆ ನೀರು ಹಾಯಿಸಲು ಗೆಜೆಟ್ ನೋಟಿಪಿಕೇಷನ್ ಸದ್ಯದಲ್ಲಿಯೇ ಆದೇಶ ಆಗುವ ನಿರೀಕ್ಷೆಯಿದೆ ಎಂದರು.
ಈ ಸಂಧರ್ಭದಲ್ಲಿ ರೈತ ಮುಖಂಡರಾದ ನಾಗನಗೌಡ್ರು, ಬಿಳಿಚೋಡು ರಂಗಸ್ವಾಮಿ. ಚಿಕ್ಕಣ್ಣ ಹಾಗೂ ಇತರರು ಇದ್ದರು.