ನಗರದ ಸರ್ಕಾರಿ ಬಾಲಮಂದಿರದಲ್ಲಿ ಇ-ಸ್ಮಾರ್ಟ್ ಕ್ಲಾಸ್

ದಾವಣಗೆರೆ, ಆ. 27- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಲ ಮಂದಿರದ ನಿವಾಸಿಗಳು ಏಕ ಪೋಷಕರು, ಅನಾಥ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು  ಸೋಮವಾರದಿಂದ ಬಾಲಕರ ಸರ್ಕಾರಿ ಬಾಲ ಮಂದಿರದಿಂದ ನಿವಾಸಿಯ ಮಕ್ಕಳಿಗಾಗಿ ಇ-ಸ್ಮಾರ್ಟ್ ಕ್ಲಾಸ್ ರೂಂ ಆರಂಭಿಸಲಾಯಿತು.

ಖಾಸಗಿ ಶಾಲೆಯಲ್ಲಿ ಇರುವಂತಹ ಎಲ್ಲಾ ವ್ಯವಸ್ಥೆಯನ್ನು ಕೂಡಾ ನಮ್ಮ ಸರ್ಕಾರಿ ಶಾಲೆಯಲ್ಲಿ ಮಾಡಬೇಕೆನ್ನುವ ಮೂಲ ಉದ್ದೇಶದಿಂದ ಮತ್ತು ಇಂತಹ ಮಕ್ಕಳಿಗೆ ಮೊಬೈಲ್ ಆನ್‌ಲೈನ್ ಕ್ಲಾಸಿನ ಮೊಬೈಲ್‌ನಲ್ಲಿ ನೋಡಲಿಕ್ಕೆ ಸಾಧ್ಯವಾಗದೇ ಇರುವ ಕಾರಣ ಹಾಗೂ ಅವರ ಕಣ್ಣುಗಳಿಗೆ ತೊಂದರೆಯಾಗುವ ಕಾರಣ ಇಲಾಖೆ ನಿರ್ಧರಿಸಿ ಸ್ಮಾರ್ಟ್ ಕ್ಲಾಸನ್ನು ತೆರೆಯುವ ವ್ಯವಸ್ಥೆ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಹೆಚ್. ವಿಜಯಕುಮಾರ್ ತಿಳಿಸಿದರು.

ನಗರದ ಬಾಲಕರ ಬಾಲಮಂದಿರದಲ್ಲಿ ಸದ್ಯಕ್ಕೆ ಸಂಸ್ಥೆಯಲ್ಲಿ 36 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಏಕ ಪೋಷಕರು, ಅನಾಥ ಮಕ್ಕಳು, ಸಮಾಜದಿಂದ ದೂಷಿಸಲ್ಪಟ್ಟ ಮಕ್ಕಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

error: Content is protected !!