ಸತ್‌ಚಿಂತನೆ, ಸದ್ವರ್ತನೆ ಪರಿವರ್ತನೆಯತ್ತ ಕರೆದೊಯ್ಯುತ್ತದೆ

ಸತ್‌ಚಿಂತನೆ, ಸದ್ವರ್ತನೆ ಪರಿವರ್ತನೆಯತ್ತ ಕರೆದೊಯ್ಯುತ್ತದೆ - Janathavaniಚಿತ್ರದುರ್ಗ, ಜು.27- ಸತ್‌ಚಿಂತನೆ ಮತ್ತು ಸದ್ವರ್ತನೆ ನಮ್ಮನ್ನು ಪರಿವರ್ತನೆಯ ಕಡೆಗೆ ಕರೆದುಕೊಂಡು ಹೋಗುತ್ತದೆ. ಹಾಗಾಗಿ ಪರಿವರ್ತನೆ ಎನ್ನುವ ತತ್ವದಡಿಯಲ್ಲಿ ಬದುಕನ್ನು ಆರಂಭಿಸಿಕೊಳ್ಳಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶ್ರಾವಣ ದರ್ಶನದ ಐದನೇ ದಿನದ ಫೇಸ್‌ಬುಕ್ ಮತ್ತು ಯೂಟ್ಯೂಬ್ ಲೈವ್ ಕಾರ್ಯಕ್ರಮದಲ್ಲಿ ಸತ್‌ಚಿಂತನೆ+ಸದ್ವರ್ತನೆ= ಪರಿವರ್ತನೆ ವಿಷಯ ಕುರಿತು ಮಾತನಾಡಿದರು.

ಸತ್‌ಚಿಂತನೆಯೇ ಅಂತರ್ಮುಖಿ ಸಾಧನೆ, ಸಂತೃಪ್ತಿಯ ಸಾಧನೆ. ಯಾರ ಬದುಕಿನಲ್ಲಿ ಸತ್‌ಚಿಂತನೆ ಸ್ಫುರಿಸುತ್ತದೆಯೋ ಅಂಥವರ ಬದುಕು ಗೊಂದಲಮಯವಾಗುವುದಿಲ್ಲ. ಯಾರಲ್ಲಿ ಸತ್‌ಚಿಂತನೆ ಇರುವುದಿಲ್ಲವೋ ಅವರಲ್ಲಿ ಘರ್ಷಣೆಗಳು ಇರುತ್ತವೆ. ಸತ್‌ಚಿಂತನೆ ವಿವೇಕಯುಕ್ತ ಜೀವನವನ್ನು ನಮಗೆ ಪರಿಚಯಿಸುತ್ತದೆ ಎಂದರಲ್ಲದೆ, ಸದ್ವರ್ತನೆ, ಸಮತೋಲನ ವರ್ತನೆ, ಪ್ರಬುದ್ಧ ವರ್ತನೆ, ಪರಿವರ್ತನೆ ಇತ್ಯಾದಿ ವಿಷಯಗಳ ಕುರಿತು  ಮಾತನಾಡಿದರು.

error: Content is protected !!