ಹರಿಹರ, ಆ.20- ನಗರದ ಹರ್ಲಾಪುರ 3, ಬೆಂಕಿನಗರ ಬಡಾವಣೆಯಲ್ಲಿ 2 ಸೇರಿ ಒಟ್ಟು 5 ವ್ಯಕ್ತಿಗಳಿಗೆ ಸೇರಿದಂತೆ ತಾಲ್ಲೂಕಿನ ಹೊಳೆಸಿರಿಗೆರೆ 1, ಬೆಳ್ಳೂಡಿ 2, ಮಲೇಬೆನ್ನೂರು 8, ಕೆ.ಬೇವಿನಹಳ್ಳಿ 1 ಸೇರಿದಂತೆ ಹರಿಹರ ತಾಲ್ಲೂಕಿನಲ್ಲಿ ಒಟ್ಟು 17 ವ್ಯಕ್ತಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದಲ್ಲಿ 532, ಗ್ರಾಮೀಣ ಪ್ರದೇಶದಲ್ಲಿ 317 ಸೇರಿ ಒಟ್ಟು 852 ವ್ಯಕ್ತಿಗಳಿಗೆ ಕೊರೊನಾ ಸೋಂಕು ಹರಡಿಕೊಂಡಿದ್ದು, 332 ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಹೋಂ ಐಸೋ ಲೇಷನ್ನಲ್ಲಿ 231, ದಾವಣಗೆರೆಯ ಸಿ.ಜಿ.ಆಸ್ಪತ್ರೆಯಲ್ಲಿ 142, ಕೋವಿಡ್ ಕೇರ್ ಸೆಂಟರ್ನಲ್ಲಿ 173, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 239 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 180 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಇಲ್ಲಿಯವರೆಗೆ 9548 ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ಇಲ್ಲಿಯವರೆಗೆ 285 ಕಂಟೈನ್ಮೆಂಟ್ ಝೋನ್ಗಳು ಇದ್ದು, ಅದರಲ್ಲಿ ಅವಧಿ ಮುಗಿದಿದ್ದು, 138 ಉಳಿದ 154 ಕಂಟೈನ್ಮೆಂಟ್ ಝೋನ್ಗಳಲ್ಲಿ ವಾಸಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ರೀತಿಯ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.