ಕೋವಿಡ್ : ಶವ ಸಂಸ್ಕಾರ ಸ್ವಯಂ ಸೇವಕರ ನೇಮಕ

ದಾವಣಗೆರೆ, ಆ.19- ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮುಸ್ಲಿಂ ಧರ್ಮದವರನ್ನು ನಿಯಮಾನುಸಾರ ಶವಸಂಸ್ಕಾರ ಮಾಡಲು ಜಿಲ್ಲಾ ವಕ್ಫ್ ಅಧಿಕಾರಿಯನ್ನು ನೋಡೆಲ್ ಅಧಿಕಾರಿಯನ್ನಾಗಿ ಹಾಗೂ ಆರು ಜನ ಸ್ವಯಂ ಸೇವಕರನ್ನು ನೇಮಿಸಲಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಮುಸ್ಲಿಂ ಧರ್ಮದವರು ಸಾಂಕ್ರಮಿಕ ರೋಗದಿಂದ ಮೃತಪಟ್ಟಲ್ಲಿ, ಶವ ಸಂಸ್ಕಾರವನ್ನು ಪ್ರಮಾಣಿತ ಕಾರ್ಯಾಚರಣೆ ವಿಧಾನ ಅನುಸರಿಸಿ, ಅವರ ಸಾಂಪ್ರದಾಯದಂತೆ ನೆರವೇರಿಸಲು ರಾಜ್ಯ ವಕ್ಫ್ ಇಲಾಖೆ ಸುತ್ತೋಲೆ ನೀಡಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ನಿರ್ದೇಶಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೌಜಮ್ ಪಾಷ ತಿಳಿಸಿದ್ದಾರೆ.

ಸ್ವಯಂ ಸೇವಕರು ಹೆಸರು : ಸಾಜಿದ್ ಡಿ.ಸೈಯದ್ ರಿಯಾಜ್, ಮೊಹಮ್ಮದ್ ಆಸೀಫ್, ಸಾಧಿಕ್ ವುಲ್ಲಾ, ಸೈಯದ್ ಖಲಂದರ್, ಚಮನ್ ಸಾಬ್ ಶವ ಸಂಸ್ಕಾರಕ್ಕೆ ತೆರಳುವ ಪೂರ್ವದಲ್ಲಿ ಅಗತ್ಯವಾಗಿ ಪಿಪಿಇ ಕಿಟ್, ಮಾಸ್ಕ್ ಹಾಗೂ ಇತರೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಶವ ಸಂಸ್ಕಾರ (ತದಫೀನ್) ಪ್ರಮಾಣಿತ ಕಾರ್ಯಾಚರಣೆ ವಿಧಾನದಂತೆ ನೆರವೇರಿಸಬೇಕು. ಶವಸಂಸ್ಕಾರದ ನಂತರ ವರದಿಯನ್ನು ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ನೀಡಬೇಕು.

ಅಧ್ಯಕ್ಷರ ನಿಧನ ತೆರವಾದ ಸ್ಥಾನ : ಇತ್ತೀಚೆಗೆ ದೈವಾಧೀನರಾಗಿರುವ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಯುಸೂಫ್ (ಬ್ಯಾರೆಲ್ ಯುಸೂಫ್) ಅವರ ಸ್ಥಾನಕ್ಕೆ ಮರು ಚುನಾವಣೆ ನಡೆಯಲಿದ್ದು, ಇಷ್ಟರಲ್ಲೇ ಆಡಳಿತಾಧಿಕಾರಿಗಳನ್ನು ನೇಮಿಸಲಾಗುವುದು ಎಂದು ಜಿಲ್ಲಾ ಮೂಲಗಳಿಂದ ತಿಳಿದುಬಂದಿದೆ.

error: Content is protected !!