ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಆರೋಪಿಗಳ ಬಂಧನಕ್ಕೆ ಆಗ್ರಹ

ದಾವಣಗೆರೆ, ಆ.19- ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಯಡಿಯಲ್ಲಿ ಪ್ರಕರಣ ದಾಖ ಲಾಗಿರುವ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದಿ) ವತಿಯಿಂದ ಪ್ರಗತಿಪರ ಸಂಘಟನೆಗಳು ಚಿಂತಕರ ಸಹಯೋಗದೊಂದಿಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿಯ ನಿರಂತರ  ಸತ್ಯಾಗ್ರಹವನ್ನು ಆರಂಭಿಸಲಾಗಿದೆ.

ಕಾಯ್ದೆ ಅಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಜಿ. ನಿಜಲಿಂಗಪ್ಪ ಅವರು ತಮಗೆ ಆಗುತ್ತಿದ್ದ ಅನ್ಯಾಯ, ಅವಮಾನ, ದೌರ್ಜನ್ಯ, ಜಾತಿ ನಿಂದನೆ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಕುರಿತಂತೆ ಡಾ. ರಾಘವೇಂದ್ರ ಸ್ವಾಮಿ ಮತ್ತು ಸತ್ಯನಾರಾಯಣರಾವ್ ಅವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ‌ ದೂರು ದಾಖ ಲಿಸಿ ತಿಂಗಳು ಕಳೆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ರಾಜ್ಯ ಸಂಚಾಲಕ ಹೆಚ್‌. ಮಲ್ಲೇಶ್, ಸಂಘಟನಾ ಸಂಚಾಲಕರಾದ ಡಿ. ಹನುಮಂ ತಪ್ಪ, ಎಸ್‌.ಜಿ. ವೆಂಕಟೇಶ ಬಾಬು, ಜಿಲ್ಲಾ ಸಂಚಾಲಕ ಜಿ.ಎನ್‌. ಮಲ್ಲಿಕಾರ್ಜುನ, ಗುಮ್ಮನೂರು ಮಲ್ಲಿಕಾರ್ಜುನ, ತಿಮ್ಮಣ್ಣ, ಎಚ್‌.ಸಿ. ಮಲ್ಲಪ್ಪ, ಜಿ. ನಿಜಲಿಂಗಪ್ಪ, ಡಿ.ಜಿ. ಆಸಿಫ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!