ಮಲೇಬೆನ್ನೂರು ಹೋಬಳಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಮಲೇಬೆನ್ನೂರು ಹೋಬಳಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ - Janathavaniಪುರಸಭೆ ಕಚೇರಿ ಮುಂಭಾಗ : ಪುರಸಭೆ ಮುಖ್ಯಾಧಿಕಾರಿ ಧರಣೀಂದ್ರ ಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತ ನಾಡಿದರು. ಪುರಸಭೆ ಸದಸ್ಯರಾದ ಬಿ. ಸುರೇಶ್, ಎ. ಆರೀಫ್ ಅಲಿ, ಮಾಸಣಗಿ ಶೇಖರಪ್ಪ, ಮಹಾಂತೇಶ್ ಸ್ವಾಮಿ, ಶಶಿ ಕಲಾ ಕೇಶವಾಚಾರಿ, ಸಾಕಮ್ಮ ರವಿಕುಮಾರ್, ಜಿಯವುಲ್ಲಾ, ಕೆ.ಜಿ. ಲೋಕೇಶ್, ಫಕೃದ್ದೀನ್, ಭೋವಿಕುಮಾರ್, ಎಂ.ಬಿ. ಫೈಜು, ಆದಾಪುರ ವಿಜಯಕುಮಾರ್, ಪುರಸಭೆ ಅಧಿಕಾರಿಗಳಾದ ಗುರುಪ್ರಸಾದ್, ಉಮೇಶ್ ನವೀನ್, ಇಮ್ರಾನ್, ಇಂಜಿನಿಯರ್ ನೌಷಾದ್ ಮತ್ತಿತರರು ಭಾಗವಹಿಸಿದ್ದರು.

ನಾಡ ಕಚೇರಿ: ಉಪ ತಹಶೀಲ್ದಾರ್ ಆರ್. ರವಿ ಧ್ವಜಾರೋಹಣ ನೆರವೇರಿಸಿದರು. ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಸುಭಾನಿ, ರಾಮಕೃಷ್ಣ ಇನ್ನಿತರರು ಹಾಜರಿದ್ದರು.

ಸಮುದಾಯ ಆರೋಗ್ಯ ಕೇಂದ್ರ: ವೈದ್ಯಾಧಿಕಾರಿ ಡಾ. ಲಕ್ಷ್ಮೀದೇವಿ, ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ವೀರಬಸಪ್ಪ, ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ನಟರಾಜ್, ಬೀರಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಅಧ್ಯಕ್ಷ ಪೂಜಾರ್ ಬಸಪ್ಪ ಧ್ವಜಾರೋಹಣ ನೆರವೇರಿಸಿದರು.

ಲಯನ್ಸ್ ಕ್ಲಬ್‌ : ಕೆ.ಎನ್. ಹನುಮಂತಪ್ಪ ಧ್ವಜಾರೋಹಣ ನೆರವೇರಿಸಿ ದರು. ಡಾ. ಟಿ. ಬಸವರಾಜ್, ಓ.ಜಿ. ರುದ್ರಗೌಡ್ರು, ಹೆಚ್.ಜಿ. ಚಂದ್ರಶೇಖರ್, ಪಾಲ್ಗೊಂಡಿದ್ದರು. ಲಯನ್ಸ್ ಶಾಲೆ ಮುಖ್ಯ ಶಿಕ್ಷಕ ಚಂದ್ರಶೇಖರ್ ಹಾಗೂ ಶಿಕ್ಷಕರು ಹಾಜರಿದ್ದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಂಘದ ಅಧ್ಯಕ್ಷ ಅಬ್ದುಲ್ ಹಾದಿ ಧ್ವಜಾರೋಹಣ ನೆರವೇರಿಸಿದರು.

ಕುಂಬಳೂರು ಪ್ರಾಥಮಿಕ ಕೃಷಿ ಪತ್ತಿನ ಸಂಘ: ಸಂಘದ ಅಧ್ಯಕ್ಷ ಡಿ.ಕೆ. ಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಸಂಘದ ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ, ನಿರ್ದೇಶಕರಾದ ಹಳೇಮನೆ ಆಂಜನೇಯ, ಎಂ. ವಾಸುದೇವಮೂರ್ತಿ, ಸಿಇಓ ಯಶೋಧ ಹಾಜರಿದ್ದರು.

ಬೆಳ್ಳೂಡಿ ಶಾಖಾ ಮಠ/ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಸ್ಕೂಲ್: ಸಂಯುಕ್ತಾ ಶ್ರಯದಲ್ಲಿ ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 223ನೇ ಜಯಂತಿ ಆಚರಿಸಲಾಯಿತು. ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸ್ಕೂಲ್ ಕಾರ್ಯದರ್ಶಿ ನಿಂಗಪ್ಪ, ಪ್ರಿನ್ಸಿಪಾಲ್ ಶೃತಿ ಇನಾಂದಾರ್, ಉಪನ್ಯಾಸಕ ಬೀರಪ್ಪ, ಉದ್ಯಮಿ ನಂದಿಗಾವಿ ಶ್ರೀನಿವಾಸ್, ಚೂರಿ ಜಗದೀಶ್ ಇನ್ನಿತರರಿದ್ದರು.

error: Content is protected !!