ದಾವಣಗೆರೆ,ಡಿ.23- ನಗರದ ಡಿ. ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ ನಲ್ಲಿರುವ ಶ್ರೀಮತಿ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಧನುರ್ಮಾಸದ ಪೂಜಾ ಕಾರ್ಯಕ್ರಮಗಳು ಇದೇ ದಿನಾಂಕ 16ರಿಂದ ಆರಂಭಗೊಂಡಿದ್ದು, ಬರುವ ಜನವರಿ 14ರವರೆಗೆ ನಡೆಯಲಿವೆ.
ದೇವಸ್ಥಾನದ ಶ್ರೀ ವಿನಾಯಕ ಸೇವಾ ಸಮಿತಿ ಆಶ್ರ ಯದಲ್ಲಿ ಏರ್ಪಾಡಾಗಿರುವ ಈ ಪೂಜಾ ಕಾರ್ಯಕ್ರಮ ಗಳಲ್ಲಿ ಪ್ರತಿದಿನ ಬೆಳಿಗ್ಗೆ 6.30ಕ್ಕೆ ಶ್ರೀ ಅಮ್ಮನವರಿಗೆ ವೈಯಕ್ತಿಕ ಪೂಜೆಗಳು ಜರುಗಲಿವೆ. ಭಾಗವಹಿಸಲಿಚ್ಚಿ ಸುವ ಸೇವಾರ್ಥಿಗಳು ತಮ್ಮ ಸೇವೆಯ ದಿನಾಂಕವನ್ನು ದೇವಸ್ಥಾನದಲ್ಲಿ ಮುಂಚಿತವಾಗಿ ನೋಂದಾಯಿಸಬೇಕು.
ಇದೇ ದಿನಾಂಕ 25ರ ಶುಕ್ರವಾರ ವೈಕುಂಠ ಏಕಾದಶಿ, ದಿನಾಂಕ 27ರ ಭಾನುವಾರ ಬೆಳಿಗ್ಗೆ 8 ಕ್ಕೆ ವಿಶೇಷ ಪೂಜೆ, ದಿನಾಂಕ 30ರ ಬುಧವಾರದ ಹೊಸ್ತಿಲು ಹುಣ್ಣಿಮೆ ಯಂದು ಶ್ರೀ ದತ್ತಾತ್ರೇಯ ಜಯಂತಿ ಜರುಗಲಿದೆ.
ಜನವರಿ 2ರ ಶನಿವಾರ ಶ್ರೀ ಸಂಕಷ್ಟಹರ ಚತುರ್ಥಿ, ಜನವರಿ 13ರ ಬುಧವಾರದ ಎಳ್ಳು ಅಮವಾಸ್ಯೆಯಂದು
ಶ್ರೀ ನಾಗಲಿಂಗೇಶ್ವರ ದೇವರಿಗೆ ಶ್ರೀ ರುದ್ರಾಭಿಷೇಕ,
ಶ್ರೀ ಮೃತ್ಯುಂಜಯ ಹೋಮ ನಡೆಯಲಿದೆ.
ಜನವರಿ 14ರ ಗುರುವಾರ ಧನುರ್ಮಾಸ ಪೂಜೆ ಸಮಾಪ್ತಿಯಾಗಲಿದ್ದು, ಅಂದು ಶ್ರೀ ಮಹಾವಿಷ್ಣು, ಶ್ರೀ ಮಹಾಲಕ್ಷ್ಮಿ ಹೋಮ ಆಯೋಜನೆಗೊಂಡಿದೆ ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ಆರ್.ಜಿ.ನಾಗೇಂದ್ರ ಪ್ರಕಾಶ್ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.