ಹಡಗಲಿ ಅರ್ಬನ್ ಬ್ಯಾಂಕ್ ಮಹಾಸಭೆ

ಹೊಳಲು – ಕೊಟ್ಟೂರಿನಲ್ಲಿ ಶಾಖೆ ತೆರೆಯುವ ಭರವಸೆ

ಹೂವಿನಹಡಗಲಿ, ಡಿ.21- ಹಡಗಲಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ 22ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷ ಎಂ.ನಾಗಭೂಷಣ್ ಅವರ ಅಧ್ಯಕ್ಷತೆಯಲ್ಲಿ  ಇಂದು ಜರುಗಿತು. 

ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯಾ ಕಾರ್ಯನಿ ರ್ವಹಾಧಿಕಾರಿ ಕೆ.ಸದಾನಂದ ಅವರು 2019-2020ನೇ ಸಾಲಿನ ವರದಿ ಮಂಡಿಸಿದರು. ಕೊಟ್ಟೂರು ಮತ್ತು ಹೊಳಲು ಗ್ರಾಮದಲ್ಲಿ ಎರಡು ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕಿನ ಅನುಮತಿಗಾಗಿ ಎದುರು ನೋಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ತೆರೆಯಲು ಆಡಳಿತ ಮಂಡಳಿ ಸಿದ್ಧತೆಯಲ್ಲಿದೆ ಎಂದು ತಿಳಿಸಿದರು.

ಬ್ಯಾಂಕು 53 ಲಕ್ಷದ 74 ಸಾವಿರದ 960 ರೂ. ನಿವ್ವಳ ಲಾಭವನ್ನು ಗಳಿಸಿದ್ದು, ಇದೇ ಮೊದಲ ಬಾರಿಗೆ ಮೊಬೈಲ್ ಮೂಲಕ ಲಾಗಿನ್ ಆಗುವಂತೆ ಸದಸ್ಯರಿಗೆ ಅಂತರ್ಜಾಲದ ಅನುಕೂಲತೆಗೆ ಒತ್ತು ಕೊಡಲಾಗಿದೆ. ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸುವುದು, ಆದ್ಯತಾ ವಲಯ ಮತ್ತು ದುರ್ಬಲ ವರ್ಗಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಟಿ.ಲಾಲ್ಯಾ ನಾಯ್ಕ, ನಿರ್ದೇಶಕರಾದ ಟಿ.ಮುರುಗೇಶ್, ಎಸ್.ಎಂ.ರವೀಂದ್ರ ಶೆಟ್ಟಿ, ಜಂಬಣ್ಣ ಗಣಪತಿ, ಸೊಪ್ಪಿನ ಮಂಗಳ, ಸುಮಾ ವಿಜಯ ಹಿರೇಮಠ, ಬೀರಪ್ಪ, ಕೆಂಚಮ್ಮನಹಳ್ಳಿ ಹಾಲಪ್ಪ ಉಪಸ್ಥಿತರಿದ್ದರು.

ಸಭೆಯ ಆರಂಭಕ್ಕೂ ಮೊದಲು ಸಹಕಾರಿಗಳಾದ ದಿ. ಎಸ್.ಈಶ್ವರಪ್ಪ, ದಿ. ಸೊಪ್ಪಿನ ಬಾಳಪ್ಪ, ದಿ. ಎಂ.ಶೇಖರಪ್ಪ, ದಿ.ನವಲಿ ಪಂಚಣ್ಣ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಗತಿಮಠದ ಶಿಷ್ಯ ವೃಂದದವರು ಪ್ರಾರ್ಥಿಸಿದರು. ಗದ್ದಿಗೌಡ, ಶಿವಣ್ಣ ಸ್ವಾಗತಿಸಿದರು.

error: Content is protected !!