ದಾವಣಗೆರೆ, ಡಿ.19- ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಬರುವ ಜನವರಿ 15 ರಿಂದ ಫೆಬ್ರವರಿ 5 ರವರೆಗೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನವನ್ನು ನಿಯೋಜಿಸಲಾಗಿದೆ.
ಅಭಿಯಾನ ಹಿನ್ನೆಲೆ ನಗರದಲ್ಲಿರುವ ಶ್ರೀ ಉಮಿಯಾ ಮಂದಿರದಲ್ಲಿ ಇತ್ತೀಚೆಗೆ ಸಂತ ಸಮಾವೇಶ ಆಯೋಜಿಸಲಾಗಿತ್ತು. ಯರಗುಂಟೆಯ ಶ್ರೀ ಪರಮೇಶ್ವರ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಕೇದಾರ ವೈರಾಗ್ಯ ಸಿಂಹಾಸನ ಶಾಖಾಮಠ ಚನ್ನಗಿರಿ, ಶ್ರೀ ವಚನಾನಂದ ಸ್ವಾಮಿ ಪಂಚಮಸಾಲಿ ಪೀಠ , ರಾಮಕೃಷ್ಣ ಆಶ್ರಮದ ಶಾರದೇಶಾನಂದ ಸ್ವಾಮೀಜಿ ಹರಿಹರ, ಸಾಧ್ವೀ ಅಮ್ಮ ಮಾತಾಜೀ ಸುರೇಖಮ್ಮ ಯರಗುಂಟೆ ಇವರ ಉಪಸ್ಥಿತಿಯಲ್ಲಿ ಸಮಾವೇಶ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಘಟನಾ ಕಾರ್ಯದರ್ಶಿ ಮತ್ತು ಟ್ರಸ್ಟ್‌ನ ರಾಜ್ಯ ಸಹ ಪ್ರಮುಖರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟ್ರಸ್ಟ್ ಮೂಲಕ ಜನವರಿ 14 ರಿಂದ ಪ್ರಾರಂಭವಾಗಲಿರುವ ಅಭಿಯಾನ ಕುರಿತು ಮಾಹಿತಿ ನೀಡಿ, ಉಪಸ್ಥಿತರಿದ್ದ ಸ್ವಾಮೀಜಿಗಳು ಕೈ ಜೋಡಿಸುವಂತೆ ಮನವಿ ಮಾಡಿದರು.
ಅಭಿಯಾನದ ಮೊದಲ ಸಮರ್ಪಣೆಯಾಗಿ ಶ್ರೀ ಪರಮೇಶ್ವರ ಸ್ವಾಮಿಗಳು ದೇಣಿಗೆ ನೀಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮಧು, ವಿನಾಯಕ ರಾನಡೆ, ಅರುಣ ಗುಡ್ಡದಕೆರೆ, ಪರಿಷತ್‌ನ ಮಂಜಣ್ಣ, ಸಿ.ಎಸ್. ರಾಜು, ಮಂಜುನಾಥ್, ಕೃಷ್ಣಮೂರ್ತಿ ಇನ್ನಿತರರಿದ್ದರು.