ಜಗಳೂರಿನಲ್ಲಿ ಲೋಕ ಅದಾಲತ್: 217 ಪ್ರಕರಣಗಳು ಇತ್ಯರ್ಥ

ಜಗಳೂರಿನಲ್ಲಿ ಲೋಕ ಅದಾಲತ್: 217 ಪ್ರಕರಣಗಳು ಇತ್ಯರ್ಥ - Janathavaniಜಗಳೂರು, ಡಿ. 20- ಪಟ್ಟಣ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ  ನ್ಯಾಯಾಧೀಶರಾದ ಜಿ.ತಿಮ್ಮಯ್ಯ  ಅವರ ನೇತೃತ್ವದಲ್ಲಿ ನಡೆದ  ಮೆಗಾ ಲೋಕ್‍ ಅದಾಲತ್ ನಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಒಟ್ಟು 217 ಪ್ರಕರಣಗಳು ಇತ್ಯರ್ಥಗೊಡಿದ್ದು, ಒಟ್ಟು 55,59,273 ರೂ ಮೊತ್ತವು ರಾಜಿ ಸಂಧಾನದ ಮೂಲಕ ಸಂಬಂಧಿಸಿದ ಕಕ್ಷಿದಾರರು ಪಡೆದಿರುತ್ತಾರೆ. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಒಟ್ಟು 175 ಪ್ರಕರಣಗಳು ಇತ್ಯರ್ಥಗೊಂಡಿವೆ.  ಒಟ್ಟು 33,43,077 ರೂ ಸಂದಾಯವಾಗಿದೆ. ಪಾಲು ವಿಭಾಗ ಕೋರಿ ಸಲ್ಲಿಸಿದ 2 ಪ್ರಕರಣಗಳು , 2 ನಿರ್ಧಿಷ್ಟ ಪರಿಹಾರ ಅಧಿನಿಯಮ ಪ್ರಕರಣಗಳು (Specific performance suits) ರಾಜಿಯಾಗಿರುತ್ತವೆ. ಚೆಕ್‍ ಬೌನ್ಸ್ ಗೆ ಸಂಬಂಧಿಸಿದ ಪ್ರಕರಣಗಳಲ್ಲಿ 11 ಪ್ರಕರಣಗಳು ರಾಜಿಯಾಗಿದ್ದು 18,97,000 ರೂ ಸಂದಾಯದೊಂದಿ.

ಜನನ  ಪ್ರಕರಣಗಳಿಗೆ ಸಂಬಂಧಿಸಿದ 31 ಪ್ರಕರಣಗಳು, 66 ಲಘು ಪ್ರಕರಣಗಳು ಇತ್ಯರ್ಥಗೊಂಡಿರುತ್ತವೆ ಹಾಗೂ 55 ತಪ್ಪೊ ಪ್ಪಿಗೆ ಪ್ರಕರಣಗಳ ಇವುಗಳಲ್ಲಿ (plea guilty cases) ಇತ್ಯರ್ಥಗೊಂಡಿರುತ್ತವೆ. ತಪ್ಪೊಪ್ಪಿಗೆ ಹಾಗೂ ಲಘು ಪ್ರಕರಣಗಳು ಇವುಗಳಲ್ಲಿ ಒಟ್ಟು 83,300  ರೂ ಸರ್ಕಾರಕ್ಕೆ ಜಮೆಯಾಗಿರುತ್ತದೆ. ಈ ಮೂಲಕ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಹೆಚ್ಚಾಗಿ ಇತ್ಯರ್ಥಗೊಂಡಿರುತ್ತವೆ. ಮುಂದುವರೆದು ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್.ಬಿ.ಐ ಜಗಳೂರು ಬ್ಯಾಂಕ್‍ ನ 12 ಪ್ರಕರಣಗಳು ಇತ್ಯರ್ಥಗೊಂಡಿದ್ದು ಒಟ್ಟು 9,48,200 ರೂ ಬ್ಯಾಂಕ್‍ ಜಮೆಯಾಗಿರುತ್ತದೆ. ಕೆನರಾ ಬ್ಯಾಂಕ್, ಜಗಳೂರಿನ 8 ಪ್ರಕರಣಗಳು ಇತ್ಯರ್ಥಗೊಂಡಿದ್ದು ಒಟ್ಟು10,78,544  ರೂ ಸದರಿ ಬ್ಯಾಂಕ್‍ ಗೆ ಜಮೆಯಾಗಿರುತ್ತದೆ. 

ಒಟ್ಟಾರೆಯಾಗಿ ಈ ದಿನದ ಮೆಗಾ ಲೋಕ್‍ ಅದಾಲತ್‌ನಲ್ಲಿ ಒಟ್ಟು 217 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿರುತ್ತವೆ ಹಾಗೂ ಒಟ್ಟು 55,59,273 ರೂ.  ಮೊತ್ತವು ರಾಜಿ ಸಂಧಾನದ ಮೂಲಕ ಸಂಬಂಧಿಸಿದ ಕಕ್ಷಿದಾರರು ಪಡೆದಿರುತ್ತಾರೆ.

error: Content is protected !!