ನವದೆಹಲಿ ಡಿ. 20 – ಮೂಲಭೂತ ಸೌಲಭ್ಯ ಗಳ ಗುತ್ತಿಗೆಗಳಿಗೆ ಸಂಬಂಧಿಸಿದ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥ ಗೊಳಿಸಲು ವಿಶೇಷ ನ್ಯಾಯಾ ಲಯಗಳನ್ನು ಸ್ಥಾಪಿಸುವಂತೆ ಕೇಂದ್ರ ಕಾನೂನು ಸಚಿವಾಲಯ ರಾಜ್ಯಗಳಿಗೆ ತಿಳಿಸಿದೆ. ಎರಡು ವರ್ಷ ಗಳ ಹಿಂದೆ ಈ ಬಗ್ಗೆ ಕಾನೂನು ರೂಪಿಸಲಾಗಿತ್ತು.
ಭಾರತ ಹಾಗೂ ರಾಜ್ಯಗಳ ಉದ್ಯಮ ನಡೆಸುವ ಸುಲಲಿತೆಯ ಸೂಚ್ಯಂಕ ಹೆಚ್ಚಿಸಲು ಈ ಕ್ರಮ ಪ್ರಾಮುಖ್ಯತೆ ಪಡೆದಿದೆ ಎಂದು ಕಾನೂನು ಸಚಿವಾಲಯ ಹೇಳಿದೆ.
ಅಲಹಾಬಾದ್, ಕರ್ನಾಟಕ ಹಾಗೂ ಮಧ್ಯ ಪ್ರದೇಶ ಹೈಕೋರ್ಟ್ಗಳ ರೀತಿಯಲ್ಲೇ ಇತರೆ ಹೈಕೋರ್ಟ್ಗಳೂ ಸಹ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ದಿನಗಳನ್ನು ನಿಗದಿ ಪಡಿಸಬೇಕೆಂದೂ ಸಲಹೆ ನೀಡಲಾಗಿದೆ. ವಿಶೇಷ ಪರಿಹಾರ (ತಿದ್ದುಪಡಿ) ಕಾಯ್ದೆ 2018ರ ಸೆಕ್ಷನ್ 20 ಬಿ ಅನ್ವಯ ವಿಶೇಷ ನ್ಯಾಯಾಲಯಗಳನ್ನು ರೂಪಿಸಬಹು ದಾಗಿದೆ ಆದರೆ, ವಿಶೇಷ ನ್ಯಾಯಾಲಯಗಳು ಸ್ಥಾಪನೆಯಾ ಗುವ ವರೆಗೂ, ನಿಯೋಜಿತ ನ್ಯಾಯಾಲಯಗಳು ಕೆಲ ನಿರ್ದಿಷ್ಟ ದಿನಗಳಲ್ಲಿ ವಿಶೇಷ ನ್ಯಾಯಾಲಯಗಳ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಕೇಂದ್ರ ಕಾನೂನು ಸಚಿವಾಲಯ ಬಯಸಿದೆ.
ಕೆಲ ಹೈಕೋರ್ಟ್ಗಳು ಪ್ರತಿ ವಾರ ವಿಶೇಷ ದಿನಗಳನ್ನು ಮೂಲಭೂತ ಸೌಲಭ್ಯಗಳ ಗುತ್ತಿಗೆಗಳಿಗೆ ಸಂಬಂಧಿಸಿದ ಪ್ರಕರಣಗಳಿಗಾಗಿ ವಿನಿಯೋಗಿಸು ತ್ತಿವೆ. ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವವ ರೆಗೆ ಈ ವ್ಯವಸ್ಥೆಯನ್ನು ನಿಮ್ಮ ಹೈಕೋ ರ್ಟ್ಗಳಲ್ಲೂ ಅಳವಡಿಸಿಕೊಳ್ಳಬಹುದಾಗಿದೆ. ಇದು ಸಮಯ ಹಾಗೂ ವೆಚ್ಚ ಎರಡರ ದೃಷ್ಟಿಯಿಂದಲೂ ಉತ್ತಮ ವಾಗಿದೆ. ಇದರಿಂದಾಗಿ ಹೂಡಿಕೆದಾರರ ವಿಶ್ವಾಸ ಹೆಚ್ಚಾಗುತ್ತದೆ ಹಾಗೂ ಉದ್ಯಮಶೀಲತೆಗೆ ಉತ್ತಮ ವಾತಾವರಣ ದೊರೆಯಲಿದೆ ಎಂದು ತಿಳಿಸಲಾಗಿದೆ.