ಕಾರಾಗೃಹದ ಬಂಧಿಗಳನ್ನು ಭೇಟಿ ಮಾಡಲು ಇ-ಮುಲಾಕಾತ್ ವ್ಯವಸ್ಥೆ

ದಾವಣಗೆರೆ, ಡಿ.17- ಕೋವಿಡ್-19 ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿನ ಬಂಧಿಗಳನ್ನು ಭೇಟಿ ಮಾಡಲು ತಾತ್ಕಾಲಿಕ ತಡೆ ಮಾಡಲಾಗಿತ್ತು. ಆದರೆ, ಬಂಧಿಗಳ ಆತ್ಮಸ್ಥೈರ್ಯ ಮತ್ತು ಮನೋಬಲ ಹೆಚ್ಚಿ ಸಲು ಇಲಾಖಾ ವತಿಯಿಂದ ಇ-ಮುಲಾಕಾತ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇ-ಮುಲಾಕಾತ್ ಮೂಲಕ ಬಂಧಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ವಿಡಿಯೋ ಸಂಭಾಷಣೆ ಮಾಡಬಹುದಾಗಿರುತ್ತದೆ. ಬಂಧಿಗಳ ಕುಟುಂಬ ಸದ ಸ್ಯರು ಕೆಲವು ನಿಯಮಗಳನ್ನು ಅನುಸರಿಸಿ, ಬಂಧಿಗಳೊಂ ದಿಗೆ ವಿಡಿಯೋ ಸಂಭಾಷಣೆ ನಡೆಸಬಹುದಾಗಿರುತ್ತದೆ.

ವಿಡಿಯೋ ಸಂದರ್ಶನಕ್ಕಾಗಿ ಆನ್‍ಲೈನ್ ನೋಂದಣಿ ಮಾಡಿಸಲು ಸಂದರ್ಶಕರು ಗೂಗಲ್‍ನಲ್ಲಿ NPIP ಎಂಬುದಾಗಿ ಟೈಪ್ ಮಾಡಿದಾಗ ಕಂಡು ಬರುವ ವಿಷಯಾಂಶದಲ್ಲಿ New visit registration-National prison portal ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಬಂಧಿಯ ಸಂದರ್ಶನಕ್ಕಾಗಿ ಕಂಡು ಬರುವ ಆನ್‍ಲೈನ್ ಫಾರಂನಲ್ಲಿ ಕೋರಲಾದ ಮಾಹಿತಿಯನ್ನು ಭರ್ತಿ ಮಾಡಬೇಕು. ಮಾಹಿತಿಯನ್ನು ಭರ್ತಿ ಮಾಡಿ ವಿಸಿಟ್ ಮೋಡ್‍ನಲ್ಲಿ ಕಂಡು ಬರುವ 2 ಆಯ್ಕೆಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಅಂಶವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂತಿಮವಾಗಿ ಫಾರಂನ್ನು ಭರ್ತಿ ಮಾಡಿದ ಮೇಲೆ ಕಂಡುಬರುವ ಕ್ಯಾಪ್ಚರ್ ಕೋಡನ್ನು  ನಮೂದಿಸಿ, ಸಬ್‍ಮಿಟ್ ಮಾಡುವ ಮೂಲಕ ವಿಡಿಯೋ ಸಂದರ್ಶನಕ್ಕಾಗಿ ನೋಂದಣಿ ಮಾಡುವ ಪ್ರಕ್ರಿಯೆ ಸಂಪೂರ್ಣವಾಗುತ್ತದೆ.

ನೋಂದಣಿ ಮಾಡಿದ ನಂತರ ಸಂದರ್ಶಕರ ಮೊಬೈಲಿಗೆ ವಿಸಿಟ್ ರಿಜಿಸ್ಟ್ರೇಷನ್ ಸಂಖ್ಯೆ ಇ-ಮೇಲ್‍ನಲ್ಲಿ ರೂಂ ವಿಸಿಟ್ ಸಂಖ್ಯೆ ಹಾಗೂ ಭೇಟಿ ಸಮಯ ಪ್ರದರ್ಶಿತವಾಗುತ್ತದೆ. ಸಂದರ್ಶಕರು ತಮ್ಮ ಮೊಬೈಲಿನಲ್ಲಿ `jitsi meet’ ಎಂಬ mobile application ನ್ನು ಇನ್‌ಸ್ಟಾಲ್ ಮಾಡಿಕೊಳ್ಳತಕ್ಕದ್ದು. ಈ ಆಪ್ ಮೂಲಕ ವಿಡಿಯೋ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿ ಗಾಗಿ ಅಧೀಕ್ಷಕರ ಕಚೇರಿ, ಜಿಲ್ಲಾ ಕಾರಾಗೃಹ, ದಾವ ಣಗೆರೆ, ದೂರವಾಣಿ ಸಂಖ್ಯೆ: 08192-254446 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಕರ್ಣ ಬಿ.ಕ್ಷತ್ರಿ ತಿಳಿಸಿದ್ದಾರೆ.

error: Content is protected !!