ಜಗಳೂರಿನ ನ್ಯಾ. ಜಿ.ತಿಮ್ಮಯ್ಯ ಸಲಹೆ
ಜಗಳೂರು, ಡಿ.16 – ಪಟ್ಟಣದ ನ್ಯಾಯಾಲಯ ದಲ್ಲಿ ಇದೇ ದಿನಾಂಕ 19 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ವಿಡಿಯೋ ಕಾನ್ಫರೆನ್ಸ್, ವಿಡಿಯೋ ಕಾಲ್ ಹಾಗೂ ಕೋವಿಡ್ ಟೆಸ್ಟ್ (RAT) ಮೂಲಕ ಬೃಹತ್ ಲೋಕ್ ಅದಾಲತ್ತನ್ನು ಹಮ್ಮಿಕೊಂ ಡಿದ್ದು, ಪಕ್ಷಗಾರರು ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಜೆಎಂಎಫ್ ಸಿ ಮತ್ತು ಸಿವಿಲ್ ನ್ಯಾಯಾಧೀಶ ಜಿ.ತಿಮ್ಮಯ್ಯ ಸಲಹೆ ನೀಡಿದರು. ಪಟ್ಟ ಣದ ಕೋರ್ಟ್ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ಸೆ.19ರಂದು ನಡೆದ ಇ-ಲೋಕ್ ಅದಾಲ ತ್ನಲ್ಲಿ ಜಗಳೂರು ನ್ಯಾಯಾಲಯದಲ್ಲಿ ಒಟ್ಟು 635 ಪ್ರಕರಣಗಳು ಇತ್ಯರ್ಥಗೊಂಡು ರೂ.23.46 ಲಕ್ಷ ಪರಿಹಾರವನ್ನು ಸಂಬಂಧಪಟ್ಟ ಕಕ್ಷಿದಾರರು ಪಡೆದಿರು ತ್ತಾರೆ. ಈ ಬಾರಿಯೂ ವಕೀಲರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ಹಿರಿಯ ಸದಸ್ಯರ, ಅಭಿಯೋ ಜಕರ ಹಾಗೂ ಸರ್ವರ ಸಹಕಾರದಿಂದ ರಾಜೀ ಸಂ ಧಾನದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಗಳಿಸುವ ಸಂಕಲ್ಪ ಹೊಂದಲಾಗಿದೆ ಎಂದು ಹೇಳಿದರು.
ಲೋಕ್ ಅದಾಲತ್ನಲ್ಲಿ ಚಾಲ್ತಿ ಪ್ರಕರಣಗಳ ನ್ಯಾಯಾಲಯದ ಸಂಪೂರ್ಣ ಶುಲ್ಕ ಮರುಪಾವತಿಸ ಲಾಗುವುದು, ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ನ್ಯಾಯಾಲಯದ ಶುಲ್ಕ ಪಾವತಿಸುವಂತಿಲ್ಲ ಹಾಗೂ ಇಲ್ಲಿ ಇತ್ಯರ್ಥವಾಗುವ ಪ್ರಕರಣಗಳಿಗೆ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಅಲ್ಲದೆ ಉಭಯ ಪಕ್ಷಗಾರರೇ ನೇರವಾಗಿ ಅಥವಾ ವಕೀಲರ ಮುಖಾಂತರ ಭಾಗವಹಿಸಬಹುದು ರಾಜೀ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗು ವುದು. ತಾಲ್ಲೂಕಿನ ಬಡಜನರಿಗೆ ಹಣ, ಸಮಯದ ವಿಳಂಬ ಉಳಿತಾಯವಾಗಿ ಬಾಂಧವ್ಯ ಹೆಚ್ಚಿಸಿಕೊಂಡು ಸೌಹಾರ್ದಯುತ ಬದುಕಿಗೆ ಪ್ರಯೋಜನಕಾರಿಯಾ ಗಲಿದೆ ಎಂದು ಕಿವಿಮಾತು ಹೇಳಿದರು.
ವ್ಯಾಜ್ಯ ಪೂರ್ವ ಪ್ರಕರಣಗಳಾದ ಚೆಕ್ಕು ಅಮಾನ್ಯದ ಪ್ರಕರಣ, ಬ್ಯಾಂಕ್ ವಸೂಲಾತಿ ಪ್ರಕರಣ, ಕೈಗಾರಿಕೆಗಳಲ್ಲಿನ ವಿವಾದಗಳು ಹಾಗೂ ರಾಜಿಯಾ ಗಬಲ್ಲ ಅಪರಾಧಿಕ, ಚೆಕ್ಕು ಅಮಾನ್ಯದ, ಬ್ಯಾಂಕ್, ಮೋಟಾರ್ ಅಪಘಾತ ಪರಿಹಾರ ನ್ಯಾಯಾಧೀಕರಣ, ವಿದ್ಯುತ್ ಹಾಗೂ ನೀರಿನ ಶುಲ್ಕಗಳ, ವೈವಾಹಿಕ/ಕುಟುಂಬ ನ್ಯಾಯಾಲಯ, ಭೂಸ್ವಾಧೀನ, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಮತ್ತು ಪಿಂಚಣಿ, ಕಂದಾಯ, ಸಿವಿಲ್ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ್ ಅದಾಲತ್ನ ಲ್ಲಿ ಇತ್ಯರ್ಥಗೊಳಿಸಲು ಪರಿಗಣಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾದ ರೂಪ ಉಪಸ್ಥಿತರಿದ್ದರು.