ಹರಿಹರ : ಆಸ್ಪತ್ರೆ ಗುತ್ತಿಗೆ ಕಾರ್ಮಿಕರಿಂದ ಧರಣಿ

ಸಮಸ್ಯೆ ಬಗೆಹರಿಸಿದ ಜನಪ್ರತಿನಿಧಿಗಳು

ಹರಿಹರ, ಡಿ.14- ಸುಮಾರು 6 ತಿಂಗಳ ವೇತನ ಬಾಕಿ ಇರುವ ಹಿನ್ನೆಲೆಯಲ್ಲಿ ವೇತನ ಪಾವತಿಸುವಂತೆ ಆಗ್ರಹಿಸಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ದಿನಗೂಲಿ ಗುತ್ತಿಗೆ ಆಧಾರಿತ ಕಾರ್ಮಿಕರು ಪ್ರತಿಭಟನೆ ನಡೆಸಿ, ಆಸ್ಪತ್ರೆ ಮುಂಭಾಗದಲ್ಲಿ ಧರಣಿ ನಡೆಸಿದರು.

ಆಸ್ಪತ್ರೆಯಲ್ಲಿ 25 ಜನ ಗುತ್ತಿಗೆ ಆಧಾರಿತ ಕಾರ್ಮಿಕರು 15 ವರ್ಷಗಳಿಂದ ಕಾರ್ಯನಿರ್ವ ಹಿಸುತ್ತಾ ಬಂದಿದ್ದು, ವೈದ್ಯಾಧಿಕಾರಿಗಳು, ಮೇಲಾಧಿಕಾರಿಗಳು ಹೇಳುವ ಎಲ್ಲಾ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಹಗಲು-ರಾತ್ರಿ ಎನ್ನದೆ ಕಾರ್ಯನಿರ್ವಹಿಸಲಾಗಿದೆ. ಆದರೂ ಕೂಡ ಪ್ರತಿ ತಿಂಗಳು ಸಂಬಳ ನೀಡದೆ, ವಿಳಂಬ ಮಾಡುತ್ತಿದ್ದಾರೆ. ಈ ಸಂಬಂಧ ಹಲವು ಬಾರಿ ಪ್ರತಿಭಟನೆ ಮಾಡಿದ್ದರೂ ಸಹ ಕ್ರಮ ಕೈಗೊಂಡಿಲ್ಲ ಎಂದು ಸಂಘದ ಗೌರವಾಧ್ಯಕ್ಷ ಎಚ್.ಕೆ. ಕೊಟ್ರಪ್ಪ ದೂರಿದರು.

ಸ್ಥಳಕ್ಕೆ ಆಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಶಾಸಕ ಬಿ.ಪಿ. ಹರೀಶ್ ಅವರುಗಳು ಕಾರ್ಮಿಕರ ಸಮಸ್ಯೆಗ ಳನ್ನು ಆಲಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ನಾಗರಾಜ್ ಅವರನ್ನು ಸ್ಥಳಕ್ಕೆ ಕರೆಸಿದರು. ನಂತರ ಸಂಘದ ವತಿಯಿಂದ ಮನವಿ ಸಲ್ಲಿಸ ಲಾಯಿತು. ಅಧಿಕಾರಿ ನಾಗರಾಜ್ ಮಾತ ನಾಡಿ, ಕಾರ್ಮಿಕರಿಗೆ ಬಾಕಿ ನಿಂತಿರುವ ವೇತನ ವನ್ನು ಬಿಡುಗಡೆಗೊಳಿಸು ವಂತೆ ಗುತ್ತಿಗೆದಾರ ನಾಗರಾಜ್ ಮೈಸೂರು ಅವರಿಗೆ ಸೂಚಿಸಿದರು.

ಗುತ್ತಿಗೆದಾರ ನಾಗರಾಜ್ ಮೈಸೂರು ಮಾತನಾಡಿ, ನಮ್ಮ ಟೆಂಡರ್ ಪ್ರಕ್ರಿಯೆ ಆದಾಗಿನಿಂದಲೂ ಇಲಾಖೆ ನಮ್ಮ ಬಿಲ್ ಪಾವತಿ ಮಾಡಲು ವಿಳಂಬ ಮಾಡುತ್ತಿದೆ. ಆದರೂ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡಿರುತ್ತೇವೆ. ಕಾರ್ಮಿಕರ ಬಾಕಿ ವೇತನ ನೀಡಬೇಕೆಂದರೆ, ಇಲಾಖೆ ನಮಗೆ ನೀಡಬೇಕಾದ ಬಾಕಿ ಬಿಲ್ ಮೊತ್ತವನ್ನು ಪಾವತಿಸಬೇಕು. ನಂತರ ನಾನು ಕಾರ್ಮಿಕರಿಗೆ ವೇತನ ನೀಡುತ್ತೇನೆ ಎಂದು ಪಟ್ಟು ಹಿಡಿದರು.

ಒಂದು ವಾರದೊಳಗೆ ಬಿಲ್‌ ಸರಿಪಡಿಸುವುದಾಗಿ ಆರೋಗ್ಯಾಧಿಕಾರಿಗಳು ಭರವಸೆ ನೀಡಿದ ನಂತರ ಕಾರ್ಮಿಕರಿಗೆ 2 ತಿಂಗಳ ವೇತನವನ್ನು ನೀಡುವುದಾಗಿ ನಾಗರಾಜ್ ತಿಳಿಸಿದರು. ಡಿಸೆಂಬರ್ 18 ರಂದು ಉಳಿದ ಬಾಕಿ ವೇತನ ನೀಡುವುದಾಗಿ ಅವರು ಭರವಸೆ ನೀಡಿದ ನಂತರ, ನೌಕರರು ತಮ್ಮ ಕರ್ತವ್ಯಗಳಿಗೆ ಹಾಜರಾದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಂಚಾಕ್ಷರಿ, ಕಾರ್ಯದರ್ಶಿ ಸುರೇಶ್ ಸ್ವಾಮಿ ದಿನಗೂಲಿ ಆಧಾರಿತ ಕಾರ್ಮಿಕರು ಹಾಜರಿದ್ದರು. 

error: Content is protected !!