ಗ್ರಾ.ಪಂ. ಚುನಾವಣೆ 4457 ನಾಮಪತ್ರ

ಗ್ರಾ.ಪಂ. ಚುನಾವಣೆ 4457 ನಾಮಪತ್ರ - Janathavaniದಾವಣಗೆರೆ, ಡಿ.12- ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಗೆ 4457 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆಗೆ ನಿನ್ನೆ ಕಡೆಯ ದಿನವಾಗಿತ್ತು.

ದಾವಣಗೆರೆ, ಹೊನ್ನಾಳಿ ಹಾಗೂ ಜಗ ಳೂರು ತಾಲ್ಲೂಕಿನ 88 ಗ್ರಾಮ ಪಂಚಾಯ್ತಿಗಳ 1301 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 

ಅನುಸೂಚಿತ ಜಾತಿ 1227, ಅನುಸೂಚಿತ ಪಂಗಡಗಳಿಂದ 667, ಹಿಂದುಳಿದ `ಅ’ ವರ್ಗ ದಿಂದ 305, ಹಿಂದುಳಿದ `ಬಿ’ ವರ್ಗದಿಂದ 46 ಹಾಗೂ ಸಾಮಾನ್ಯ ವರ್ಗದಿಂದ 2208 ನಾಮಪತ್ರಗಳು ಸಲ್ಲಿಕೆಯಾಗಿವೆ.

ಜಗಳೂರು: 1256 ನಾಮಪತ್ರ – ಜಗಳೂರು ತಾಲ್ಲೂಕಿನ 22 ಗ್ರಾಮ ಪಂಚಾಯ್ತಿಗಳ 397 ಸ್ಥಾನಗಳಿಗೆ 1256 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶುಕ್ರವಾರವೇ  437 ನಾಮ ಪತ್ರಗಳು ಸಲ್ಲಿಕೆ ಯಾಗಿವೆ.

ಅಸಗೋಡು ಮತ್ತು ಮುಷ್ಟೂರು ಗ್ರಾ.ಪಂ. ನಲ್ಲಿ 17 ಹಾಗೂ 11 ಸ್ಥಾನ ಗಳಿಗೆ ಅತಿ ಕಡಿಮೆ ಅಂದರೆ ತಲಾ 30 ನಾಮಪತ್ರಗಳು ಬಂದಿದ್ದು. ಅತಿ ಹೆಚ್ಚು ಪಲ್ಲಾಗಟ್ಟೆ ಗ್ರಾ.ಪಂ ನ 22 ಸ್ಥಾನಗಳಿಗೆ 88 ನಾಮಪತ್ರಗಳು ಸಲ್ಲಿಕೆಯಾಗಿವೆ. ಡಿ.12 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿ14 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

error: Content is protected !!