ನೌಕರರ ಬೇಡಿಕೆ ಈಡೇರಿಕೆ ಕಷ್ಟ

ದಾವಣಗೆರೆ,ಡಿ.12- ಸಾರಿಗೆ ನೌಕರರು ಕೊರೊನಾ ದಂತಹ ಸಂಕಷ್ಟದಲ್ಲಿ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ. ಅವರ ಬೇಡಿಕೆ ಈಡೇರಿಸುವುದು ಕಷ್ಟ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಜೆಟ್‌ನಲ್ಲಿ ಶೇ.56ರಷ್ಟು ಸಿಬ್ಬಂದಿಯ ವೇತನಕ್ಕೆ ಹೋಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸು ವುದು ಕಷ್ಟ. ಇದನ್ನು  ನೌಕರರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಾಯಕತ್ವ ಬದಲಾವಣೆ ಇಲ್ಲ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಬರುವ ದಿನಗಳಲ್ಲಿ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರು ತ್ತದೆ. ಹೀಗಾಗಿ ಜೆಡಿಎಸ್ ಸಹಕಾರದ ಪ್ರಶ್ನೆಯೇ ಇಲ್ಲ ಎಂದು ಈಶ್ವ ರಪ್ಪ ಸ್ಪಷ್ಟ ಪಡಿಸಿದರು. ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಸುಳ್ಳಿಗೆ ಮತ್ತೊಂದು ಹೆಸರು ಸಿದ್ದರಾಮಯ್ಯ ಎಂದರು.

ಕುರುಬರ ಎಸ್ಟಿ ಹೋರಾಟದಲ್ಲಿ ಆರ್‌ಎಸ್‌ಎಸ್‌ ಪಾತ್ರ ಇಲ್ಲ. ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಇದು. ಅದರೂ ಎಡಪಂಥೀಯರು ಆರ್‌ಎಸ್‌ಎಸ್‌ ಪಾತ್ರ ಇದೆ ಎನ್ನುತ್ತಿದ್ದಾರೆ. ಅವರಿಗೆ ಆರ್‌ಎಸ್‌ಎಸ್‌ ಅಂದ್ರೆ ಭಯ. ಅದಕ್ಕೆ ಈ ಆರೋಪ ಮಾಡ್ತಿದ್ದಾರೆ ಎಂದು ಸಚಿವ  ಈಶ್ವರಪ್ಪ ಹೇಳಿದರು.

ನನ್ನಂತಹ ಕೋಟ್ಯಂತರ ದೇಶಭಕ್ತರನ್ನು ಸೃಷ್ಟಿಸಿದ್ದು ಆರ್‌ಎಸ್‌ಎಸ್‌. ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿ ಕಾಣುವಂತೆ ಇವರಿಗೆ ಎಲ್ಲದರಲ್ಲೂ ಆರ್‌ಎಸ್‌ಎಸ್‌ ಕಾಣುತ್ತದೆ ಎಂದು ಟೀಕಿಸಿದರು.

error: Content is protected !!