ದಾವಣಗೆರೆ, ಡಿ.12- ಶ್ರೀ ಕನ್ನಿಕಾಪರಮೇಶ್ವರಿ ಕೋ – ಆಪ್ ಬ್ಯಾಂಕ್ 2019-20ರ ಸಾಲಿನಲ್ಲಿ 2.22 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದ್ದು, ಮುಂದಿನ ವರ್ಷ 2.50 ಕೋಟಿ ರೂ.ಗಳ ಲಾಭದ ಗುರಿ ಹೊಂದಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಆರ್.ಜಿ. ಶ್ರೀನಿವಾಸ ಮೂರ್ತಿ ಹೇಳಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಲಾಗಿದ್ದ 54ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುತ್ತಿದ್ದ ಅವರು, 2019-20ರಲ್ಲಿ ಬ್ಯಾಂಕ್ 3.56 ಕೋಟಿ ರೂ.ಗಳ ಒಟ್ಟು ವ್ಯವಹಾರ ಲಾಭ ಗಳಿಸಿದೆ.
79.82 ಲಕ್ಷ ರೂ.ಗಳ ಆದಾಯ ತೆರಿಗೆ, ಶಾಸನಬದ್ಧ ಪ್ರವದಾನಗಳಿಗೆ 54.64 ಲಕ್ಷ ರೂ.ಗಳ ನಂತರ 2.22 ಕೋಟಿ ರೂ.ಗಳ ನಿವ್ವಳ ಲಾಭ ದೊರೆತಿದೆ. ಇದು ಕಳೆದ ಸಾಲಿಗೆ ಹೋಲಿಸಿದರೆ ಶೇ.7.46ರ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
ವರ್ಷದ ಆರಂಭದಲ್ಲಿ ಸ್ವಂತ ನಿಧಿ 9.65 ಕೋಟಿ ರೂ. ಇದ್ದದ್ದು, ಸಾಲಿನ ಅಂತ್ಯಕ್ಕೆ 10.38 ಕೋಟಿ ರೂ.ಗಳಿಗೆ ತಲುಪಿದ್ದು, ಶೇ.7.63 ರ ಹೆಚ್ಚಳವಾಗಿದೆ. ಠೇವಣಿ ಪ್ರಮಾಣ 84.67 ಕೋಟಿ ರೂ. ಇದ್ದದ್ದು, 94.28 ಕೋಟಿ ರೂ.ಗಳಿಗೆ ತಲುಪಿದ್ದು, ಶೇ.11.35ರ ಹೆಚ್ಚಳವಾಗಿದೆ. ಸಾಲ ಮುಂಗಡಗಳ ಪ್ರಮಾಣ 65.57 ಕೋಟಿ ರೂ. ಆಗಿದೆ ಎಂದು ಹೇಳಿದ್ದಾರೆ.
100.89 ಕೋಟಿ ರೂ.ಗಳಿದ್ದ ದುಡಿಯುವ ಬಂಡವಾಳ, 2019-20ರ ಸಾಲಿನ ಅಂತ್ಯಕ್ಕೆ 111.38 ಕೋಟಿ ರೂ.ಗಳಿಗೆ ತಲುಪಿದ್ದು, ಬಂಡ ವಾಳ ಪ್ರಮಾಣ ಶೇ.10.38 ರಷ್ಟು ಪ್ರಗತಿ ಸಾಧಿ ಸಿದೆ. 2020-21ರ ಸಾಲಿನಲ್ಲಿ ಬ್ಯಾಂಕಿನಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ, ಸಾಲ ಮುಂಗ ಡಗಳನ್ನು 700 ಲಕ್ಷ ರೂ.ಗಳಿಗೆ ಹೆಚ್ಚಿಸುವುದು, ಠೇವಣಿಗಳನ್ನು 1020 ಲಕ್ಷ ರೂ.ಗಳಿಗೆ ಹೆಚ್ಚಿಸುವ ಹಾಗೂ 250 ಲಕ್ಷ ರೂ.ಗಳ ಲಾಭ ಗಳಿಸುವ ಗುರಿ ಇದೆ ಎಂದವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ನಿರ್ದೇಶಕ ಆರ್.ಎಲ್. ಪ್ರಭಾಕರ್, ದೇಶದ ಆರ್ಥಿಕ ವಲಯದಲ್ಲಿ ಹಣಕಾಸು ವಿಷಮ ಪರಿಸ್ಥಿತಿ ಹಾಗೂ ಕೊರೊನಾ ಪರಿಸ್ಥಿತಿಯಲ್ಲೂ ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಸಮಗ್ರ ಅಭಿವೃದ್ಧಿಯಾಗಿದೆ ಎಂದರು.
ಬ್ಯಾಂಕ್ ನಿರ್ದೇಶಕರಾದ ಆರ್.ಎನ್. ಸುಜಾತ, ಕೆ.ಎಸ್. ಸತೀಶ್, ಎನ್. ಕಾಶಿನಾಥ್, ಕೆ.ಎನ್. ಅನಂತರಾಮ ಶೆಟ್ಟಿ, ಎ.ಎಸ್.ಸತ್ಯನಾರಾಯಣ ಸ್ವಾಮಿ, ಕೆ.ವಿ. ಮಂಜುನಾಥ್, ಜೆ. ರವೀಂದ್ರ ಗುಪ್ತ, ಬಿ.ಎಸ್.ಶಿವಾನಂದ, ವೈ.ಬಿ. ಸತೀಶ್, ಬಿ.ಎಸ್. ರಾಘವೇಂದ್ರ ಶೆಟ್ಟಿ, ಕೆ.ಎಂ. ಗೀತಾರಾಂ, ಜಿ. ಶ್ರೀಧರ್, ಆರ್. ನಾಗರಾಜ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ಪ್ರಶಾಂತ ಪಡಗಲ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಭೀಮಾನಂದ ಶೆಟ್ಟಿ, ಶಾಖಾ ವ್ಯವಸ್ಥಾಪಕರಾದ ಪಿ.ವಿ. ಪ್ರಸಾದ್, ಎಸ್.ಆರ್. ವಿಜಯ್ ಕುಮಾರ್, ಎನ್. ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.