ಮೈಸೂರು ವಿಭಾಗದಿಂದ 20 ರೈಲುಗಳಿಗೆ ಚಾಲನೆ

ದಾವಣಗೆರೆ, ಡಿ. 5 – ಪ್ರಯಾಣಿಕರಿಂದ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಮೈಸೂರು ವಿಭಾಗದಲ್ಲಿ 20 ರೈಲುಗಳಿಗೆ ಮರು ಚಾಲನೆ ನೀಡಲು ನಿರ್ಧರಿಸಲಾಗಿದೆ. ಇವುಗಳಲ್ಲಿ ಕಾಯ್ದಿರಿಸದ, ಸಂಪೂರ್ಣವಾಗಿ ಕಾಯ್ದಿರಿಸಿದ ಪ್ರಯಾಣಿಕ ಎಕ್ಸ್‌ಪ್ರೆಸ್ ರೈಲುಗಳು ಸೇರಿವೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ರೈಲುಗಳಲ್ಲಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದ್ದು, ಈ ರೈಲುಗಳ ಬಳಕೆ ಅವಲಂಬಿಸಿ ಮುಂದಿನ ದಿನಗಳಲ್ಲಿ ರೈಲು ಸೇವೆ ಮತ್ತಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಲಾಗಿದೆ.

ಸಂಪೂರ್ಣವಾಗಿ ಕಾಯ್ದಿರಿಸಿದ ಕೆ.ಎಸ್.ಆರ್. ಬೆಂಗಳೂರು – ಧಾರವಾಡ ರೈಲು ಡಿ.7ರಿಂದ ಡಿ.16ರ ನಡುವೆ ಸಂಚರಿಸಲಿದೆ. ಇದು ಕೋವಿಡ್ ಪೂರ್ವದಲ್ಲಿ ರೈಲು ಸಂ. 12725 ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ. 02726 ಧಾರವಾಡ – ಕೆ.ಎಸ್.ಆರ್. ಬೆಂಗಳೂರು ಸಹ ಸಂಪೂರ್ಣವಾಗಿ ಕಾಯ್ದಿರಿಸಿದ ರೈಲಾಗಿದ್ದು, ಡಿ.8ರಿಂದ 17ರವರೆಗೆ ಕೋವಿಡ್ ಪೂರ್ವದ ರೈಲು ಸಂಖ್ಯೆ 12726 ರೀತಿಯಲ್ಲಿ ಪ್ರತಿದಿನ ಕಾರ್ಯ ನಿರ್ವಹಿಸಲಿದೆ.

06589 ಸಂಪೂರ್ಣವಾಗಿ ಕಾಯ್ದಿರಿಸಿದ ಕೆ.ಎಸ್.ಆರ್. ಬೆಂಗಳೂರು – ಮೀರಜ್ ರೈಲು ಪ್ರತಿದಿನ ಡಿ.7ರಿಂದ 16ರವರೆಗೆ ಕಾರ್ಯ ನಿರ್ವಹಿಸಲಿದೆ. 06590 ಮೀರಜ್  – ಬೆಂಗಳೂರು ರೈಲು ಡಿ.8ರಿಂದ 17ರವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

error: Content is protected !!