ದಾವಣಗೆರೆ, ಡಿ.5- ಕೋವಿಡ್ ರೋಗವನ್ನು ನಿಯಂತ್ರಿಸುವ ಸಲುವಾಗಿ ಸರ್ವೇಕ್ಷಣಾ ಸಿಬ್ಬಂದಿಗಳು ಸಾರ್ವಜನಿಕರ ಮನೆ ಬಾಗಿಲಿಗೆ ಬಂದಂತಹ ಸಂದರ್ಭದಲ್ಲಿ ಸಾರ್ವಜನಿಕರು ಮುಂದೆ ನಿಂತು ತಪಾಸಣೆಗೆ ಸಹಕರಿಸದೇ ಇರುವುದು ಜಿಲ್ಲೆಯಾದ್ಯಂತ ಕಂಡುಬಂದಿದೆ.
ಕೋವಿಡ್ ರೋಗವನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಅಗತ್ಯ ಚಿಕಿತ್ಸೆ ನೀಡಿ ಸಂಭವಿಸಬಹುದಾದ ಸಾವುಗಳನ್ನು ತಪ್ಪಿಸಬಹುದಾಗಿದೆ. ರೋಗ ಲಕ್ಷಣಗಳು ಇದ್ದಾಗ್ಯೂ ಸಹ ಸರ್ಕಾರದ ನಿಯಮಾವಳಿಗಳ ಪ್ರಕಾರ ತಪಾಸಣೆಗೆ ಒಳಪಡಿಸಿಕೊಳ್ಳದೆ ಮನೆಯಲ್ಲಿಯೇ ಇದ್ದುಕೊಂಡು ರೋಗ ಲಕ್ಷಣ ಉಲ್ಬಣವಾದ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಬರುತ್ತಿರುವುದು ಕಂಡುಬಂದಿದೆ.
ಸಾರ್ವಜನಿಕರು ಕೋವಿಡ್ ನಿಯಂತ್ರಣದ ಸಲುವಾಗಿ ತಮ್ಮ ವಾರ್ಡ್, ಗ್ರಾಮಗಳ ಮನೆ ಬಾಗಿಲಿಗೆ ಸರ್ವೇಕ್ಷಣಾ ಸಿಬ್ಬಂದಿಗಳು ತಪಾಸಣೆಗೆ ಬಂದಾಗ ತಪಾಸಣೆಗೆ ಒಳಡುವಂತೆ ಬೀಳಗಿ ಕೋರಿದ್ದಾರೆ.