ದಾವಣಗೆರೆ, ಡಿ.3- ಅಲಹಾಬಾದ್ ಉಚ್ಛ ನ್ಯಾಯಾಲಯವು ಮತಾಂತರದ ಉದ್ದೇಶದಿಂದ ವಿವಾಹವು ಸರಿಯಲ್ಲ ಎಂದು ತೀರ್ಪು ನೀಡಿದ ನಂತರ ಇಡೀ ದೇಶದಲ್ಲಿ ಲವ್ ಜಿಹಾದ್ ಎಂಬ ಪದವನ್ನು ಬಳಸುತ್ತಿರುವುದು ಖಂಡನೀಯ ಎಂದು ವಕೀಲ ಅನೀಸ್ ಪಾಷಾ ಹೇಳಿದ್ದಾರೆ.
ರಾಜ್ಯದ ಪ್ರತಿಯೊಬ್ಬ ವ್ಯಕ್ತಿ ಯಾವುದೇ ಜಾತಿ, ಮತ ಭೇದವಿಲ್ಲದೆ ಸಮಾನನಾಗಿರುತ್ತಾನೆ. ನಡೆದಿರುವಂತಹ ಅಂತರ್ಜಾತಿ ವಿವಾಹಗಳನ್ನು ಪರಿಶೀಲಿಸಿದರೆ ಕೇವಲ ಮುಸ್ಲಿಂ ಜನಾಂಗದ ಯುವಕರಷ್ಟೇ ಅನ್ಯ ಕೋಮಿನ ಯುವತಿಯರೊಂದಿಗೆ ವಿವಾಹವಾಗಿರುವುದಿಲ್ಲ.
ಅನ್ಯ ಕೋಮಿನ ಯುವಕರು ಕೂಡ ಮುಸ್ಲಿಂ ಯುವತಿಯರೊಂದಿಗೆ ವಿವಾಹವಾಗಿ ಮುಸ್ಲಿಂ ಯುವತಿಯರು ಅನ್ಯ ಕೋಮಿಗೆ ಮತಾಂತರವಾದ ಘಟನೆಗಳು ಬಹಳಷ್ಟಿವೆ.
ಕೇವಲ ಮುಸ್ಲಿಂ ಧರ್ಮವನ್ನು ಗುರಿಯಾಗಿಸಿ ಅಪಪ್ರಚಾರ ಮಾಡುವುದು ಸೂಕ್ತವಲ್ಲ. ಒಂದು ವೇಳೆ ಲವ್ ಜಿಹಾದ್ ಪದವನ್ನು ಬಳಸಿ ಹೇಳಿಕೆ ನೀಡಿದರೆ ರಾಜ್ಯಾದ್ಯಂತ ಮಾನನಷ್ಟ ಮೊಕದ್ದಮೆಗಳನ್ನು ಹೂಡಲಾಗುವುದು ಎಂದು ಅವರು ತಿಳಿಸಿದ್ದಾರೆ.