ಜಗಳೂರು, ಡಿ.3- ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮತ್ತು 200 ಕೋಟಿ ಹಣ ಮೀಸಲಿಡುವಂತೆ ಹಾಗೂ ಎಸ್ಟಿಗೆ ಸೇರಿಸುವಂತೆ ಆಗ್ರ ಹಿಸಿ, ಇದೇ ದಿನಾಂಕ 7ರಂದು ತಾಲ್ಲೂಕಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಡುಗೊಲ್ಲ ಸಮುದಾಯದ ತಾಲ್ಲೂಕಾಧ್ಯಕ್ಷ ಕೃಷ್ಣಪ್ಪ ತಿಳಿಸಿದರು.
ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಕಾಡುಗೊಲ್ಲ ಸಮುದಾಯವನ್ನು ಗುರುತಿಸಿದ ರಾಜ್ಯ ಸರ್ಕಾರ, ಅಭಿವೃದ್ಧಿ ನಿಗಮ ಮಾಡಿರುವುದು ಸ್ವಾಗ ತಾರ್ಹ. ಆದರೆ ಇದುವರೆಗೂ ಅಧ್ಯಕ್ಷರ ನೇಮಕವಿಲ್ಲ, ಒಂದು ನಯಾಪೈಸೆ ಹಣ ಮೀಸಲಿಟ್ಟಿಲ್ಲ. ಆದರೆ ಇತ್ತೀಚೆಗೆ ಮಾಡಿದ ನಿಗಮ, ಮಂಡಳಿಗಳಿಗೆ ಹಣ ಮೀಸಲಿಟ್ಟಿರುವುದು ಎಷ್ಟು ಸರಿ, ಮೇಲ್ನೋಟಕ್ಕೆ ಶಿರಾ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ನಿಗಮ ಸ್ಥಾಪನೆಗೆ ಮುಂದಾಗಿರುವುದು ಅನುಮಾನಕ್ಕೆ ಎಡೆಮಾ ಡಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಬುಡಕಟ್ಟು ಸಮುದಾಯದ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಲು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳಿಸಿದ್ದರು. ಆದರೆ ಈಗಿನ ಸರ್ಕಾರ ಇದರ ಬಗ್ಗೆ ನಿರ್ಲಕ್ಷ್ಯ ತೋರಿದೆ.
ತಾಲ್ಲೂಕಿನ ಕೆಲವೆಡೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಆದರೆ ನಮ್ಮ ತಾಲ್ಲೂಕಿನಲ್ಲಿ ಜಾತಿ ಪ್ರಮಾಣ ಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ. ತಕ್ಷಣವೇ ಜಿಲ್ಲಾಧಿಕಾರಿ ಅಥವಾ ತಹಸೀಲ್ದಾರ್ ಮೂಲಕ ಪ್ರಮಾಣ ಪತ್ರ ಕೊಡಲು ಸರ್ಕಾರ ಆದೇಶ ಹೊರಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಚಿತ್ತಪ್ಪ, ತಿಪ್ಪೇಸ್ವಾಮಿ, ಇಂದ್ರೇಶ್, ತೋರಣಗಟ್ಟೆ ಬಾಲಕೃಷ್ಣ, ಬಡಪ್ಪ, ವೀರೇಶ್, ಬಾಲಣ್ಣ, ಹನುಮಂತಪ್ಪ, ಪ್ರಕಾಶ್, ಲ್ಯಾಬ್ ಶಿವು, ರಮೇಶ್ ಯಾದವ್, ಮಹಾಲಿಂಗಪ್ಪ, ರಂಗಪ್ಪ, ಬಸವರಾಜ್ ಇದ್ದರು.