ದಾವಣಗೆರೆ, ನ.27- ಜನಪ ದರ ಮೌಖಿಕ ಭಾಷೆ ಜಾನಪದ. ಓದು ಬರಹವನ್ನರಿಯದ ನಾಗರಿಕ ತೆಯ ಕೆಳಹಂತದ ಹಳ್ಳಿಯ ಜನತೆಯ ವಿಶ್ವಕೋಶ ಜಾನಪದ. ಜನ ಜೀವನದಲ್ಲಿ ಹಾಸುಹೊಕ್ಕಾಗಿ ರುವ ಹಾಸ್ಯವು ಜಾನಪದದಲ್ಲಿ ಹುಟ್ಟಿಕೊಳ್ಳುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ. ಎಚ್. ವಿಶ್ವನಾಥ್ ತಿಳಿಸಿದರು.
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಂತರ್ಜಾಲದ ಮೂಲಕ ಹಮ್ಮಿಕೊಂಡಿರುವ ಕನ್ನಡ ನುಡಿಹಬ್ಬದ 26ನೇ ದಿನದ ಉಪನ್ಯಾಸದಲ್ಲಿ `ಜನಪದರ ಹಾಸ್ಯಪ್ರವೃತ್ತಿ’ ಎನ್ನುವ ವಿಷಯ ಕುರಿತು ಅವರು ಮಾತನಾಡಿದರು.
ಜನಪದವು ಜನರ ಜೀವನಕ್ಕೆ ಬೇಕಾದಂತಹ ಬಹುಮುಖ್ಯ ವಿಚಾರಗಳನ್ನು ಜಾನಪದ ಕಥೆಗಳ ಮೂಲಕ, ಹಾಡುಗಳ ಮೂಲಕ, ಲಾವಣಿಗಳ ಮೂಲಕ, ಜಾನಪದ ನಾಟಕಗಳ ಮೂಲಕ ಕಟ್ಟಿಕೊಟ್ಟಿದೆ. ಜನಪದ ಸಾಹಿತ್ಯದ ಆಳದಲ್ಲೂ ಹಾಸ್ಯವನ್ನು ಕಾಣಬಹುದಾಗಿದೆ. ಅಂದರೆ ಗರತಿಯರ ಹಾಡಿನಲ್ಲಿ, ಬೆಡಗು ಗಳಲ್ಲಿ, ಒಗಟುಗಳಲ್ಲಿ, ಗಾದೆಗಳಲ್ಲಿ ಹಾಸ್ಯ ಹಾಸು ಹೊಕ್ಕಾಗಿದೆ.
ಜನಪದರು ಕಂಡುಕೊಂಡ ಮುಖ್ಯವಾದ ಸತ್ಯವೆಂದರೆ ಹಾಸ್ಯಗಳ ಜೊತೆಗೆ ನೀತಿಸಾರಗ ಳನ್ನು ಹೊರಹಾಕಲಾಗಿದೆ. ಹಾಸ್ಯದ ಮೂಲಕ ಸಮಾಜದಲ್ಲಿರುವ ಅಂಕು-ಡೊಂಕುಗಳನ್ನು, ಆಚರಣೆಗಳನ್ನು, ಆಚಾರ-ವಿಚಾರಗಳನ್ನು, ಪದ್ಧತಿಗಳನ್ನು ಹೀಗೆ ವಿವಿಧ ಮುಖಗಳನ್ನು ಹಾಸ್ಯದ ಮೂಲಕ ಜನರಿಗೆ ಜನಪದರು ತಲುಪಿಸುತ್ತಿದ್ದರು. ನಾಟಕಗಳಲ್ಲಿ, ಬಯಲಾಟ ಗಳಲ್ಲಿ ನಿತ್ಯಜೀವನದ ಸನ್ನಿವೇಶಗಳನ್ನು ಎದುರಿಸುತ್ತಲೇ ವಿಭಿನ್ನ ಹಾಸ್ಯ ಪಾತ್ರಗಳ ಮೂಲಕ ಜನರಿಗೆ ಮನರಂಜನೆಯನ್ನು ಜನಪದರು ನೀಡುತ್ತಿದ್ದರು ಎಂದು ವಿಶ್ವನಾಥ್ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಾವ ಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, `ಬೆಳಗಾಗಿ ನಾನೆದ್ದು ಯಾರಾರ ನೆನೆಯಲಿ ಎಳ್ಳು ಜೀರಿಗೆ ಬೆಳೆವಂತ, ಎಳ್ಳು ಜೀರಿಗೆ ಬೆಳೆ ವಂತ ಭೂಮಿತಾಯ ಎದ್ದೊಂದು ಗಳಿಗೆ ನೆನೆ ದೇನಾ’ ಎನ್ನುವ ಜಾನಪದ ಹಾಡಿನ ಸೊಗಡು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಮದುವೆ ಮನೆ, ಹೊಲ ಮನೆ ಕೆಲಸದ ಸಂದರ್ಭಗಳಲ್ಲಿ ಹಾಸ್ಯ ಚಟಾಕಿಗಳ ಮೂಲಕ ಜೀವನ ಕಳೆಯು ತ್ತಿದ್ದ ಕಾಲ ಅಂದಿನದಾಗಿತ್ತು. ಇಂದಿನ ಆಧು ನಿಕ ಯುಗದಲ್ಲಿ ಸಮಾಜದಲ್ಲಿ ಜನಪದರ ಇಂತಹ ಸೊಗಡು ಮಾಯವಾಗುತ್ತಿದೆ. ಇವತ್ತು ಸಾಹಿತ್ಯಕ್ಕೆ ಜನಪದ ಹಾಡುಗಳು, ಒಗಟುಗಳು, ಸಂಭಾಷಣೆಗಳು ಮೂಲಾಧಾರ ಗಳಾಗಿ ಇಂದು ಈ ಮಟ್ಟದಲ್ಲಿ ಸಾಹಿತ್ಯ ಬೆಳೆ ಯಲಿಕ್ಕೆ ಸಾಧ್ಯವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ನುಡಿದರು.
ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಸ್ವಾಗತಿಸಿದರು.
ಇಂದಿನ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ನಾಡಗೀತೆ ಹಾಗೂ ಕನ್ನಡ ಗೀತೆಗಳನ್ನು ದಾವಣಗೆರೆಯ ಕದಳಿ ಮಹಿಳಾ ವೇದಿಕೆಯ ಝೇಂಕಾರ ತಂಡದವರು ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು.