ಕೊಟ್ಟೂರು, ನ.24- ಕೊಟ್ಟೂರು ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಸ್. ಈಶ್ವರಗೌಡ್ರು, ಉಪಾಧ್ಯಕ್ಷರಾಗಿ ನಿಂಬಳಗೆರೆ ಕಲ್ಲೇಶಪ್ಪ ಅವರು ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಬೇಲಿಗೌಡ್ರು ನಾಗರಾಜ, ಹೂಗಾರ ನಾಗರಾಜ್, ಎಸ್.ವೀರೇಶ್ ಗೌಡ್ರು, ಕೆ. ಕರಿಬಸವನಗೌಡ ಹಾಗೂ ಅಳವಂಡಿ ಕೊಟ್ರೇಶ್, ಮಮತ ಎಸ್. ಮಲ್ಲೇಶಪ್ಪ, ಅಶೋಕ್, ಗಾಣಗಟ್ಟಿ ಮಹಾಂ ತೇಶ್, ಉಮಾಪತಿ ಹ್ಯಾಳ, ಕೆ. ರಾಮಪ್ಪ ಕರುಣಕುಮಾರ್ ಅವರು ಆಯ್ಕೆಯಾಗಿದ್ದಾರೆ. ಆಯ್ಕೆಯ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅಧ್ಯಕ್ಷ ಕೆ.ಎಸ್. ಈಶ್ವರಗೌಡ್ರು, ಈ ಸಮಿತಿಯು ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ರೈತರ ಪರವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.