ದಾವಣಗೆರೆ, ನ.23- ಇದೇ ದಿನಾಂಕ 26 ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರದಲ್ಲಿ ಎಲ್ಲಾ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಪಾಲ್ಗೊಂಡು ಮುಷ್ಕರ ಯಶಸ್ವಿ ಗೊಳಿಸುವಂತೆ ಜೆಸಿಟಿಯು ಅಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆದಾಯ ತೆರಿಗೆ ವ್ಯಾಪ್ತಿ ಹೊರಗಿರುವ ಎಲ್ಲಾ ಕುಟುಂಬ ಗಳಿಗೆ ಕೇಂದ್ರ ಸರ್ಕಾರ ತಿಂಗಳಿಗೆ 7500 ರೂ. ನಗದು ವರ್ಗಾವಣೆ ಮಾಡಬೇಕು. ಅಗತ್ಯವಿರುವವರಿಗೆ ತಿಂಗಳಿಗೆ 10 ಕೆಜಿ ಉಚಿತ ಪಡಿತರ ನೀಡಬೇಕು.
ಉದ್ಯೋಗ ಖಾತ್ರಿ ಯೋಜನೆ ನಗರಕ್ಕೂ ವಿಸ್ತರಿಸ ಬೇಕು. ರೈತ ಹಾಗೂ ಕಾರ್ಮಿಕ ವಿರೋಧಿ ಸಂಹಿತೆ ಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಸಬೇಕು. ಅಕಾಲಿಕ ನಿವೃತ್ತರ ಮೇಲಿ ನ ಕ್ರೂರ ಸುತ್ತೋಲೆ ರದ್ದುಪಡಿಸಬೇಕು. ಎನ್.ಪಿ.ಎಸ್. ಪಿಂಚಣಿ ರದ್ದು ಮಾಡಿ ಹಿಂದಿನ ಪಿಂಚಣಿ ಯೋಜನೆ ಪುನರ್ ಸ್ಥಾಪಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿ ಕೆಗಾಗಿ ಮುಷ್ಕರ ನಡೆಸುತ್ತಿರುವುದಾಗಿ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಮುಖಂಡರು ಗಳಾದ ರಾಘವೇಂದ್ರ ನಾಯರಿ, ಆವರಗೆರೆ ವಾಸು, ದಾಕ್ಷಾಯಣಮ್ಮ, ಮಂಜುನಾಥ ಕೈದಾಳೆ, ಆನಂದರಾಜ್, ನಾಗರಾಜಾಚಾರಿ, ಜಬೀನಾ ಖಾನಂ, ಶಾರದಮ್ಮ, ತಿಪ್ಪೇಸ್ವಾಮಿ, ಕುಕ್ಕುವಾಡ ಮಂಜುನಾಥ, ರಾಮಪ್ಪ, ಹನುಮಂತಪ್ಪ, ಶಿವಾಜಿರಾವ್ ಇತರರು ಉಪಸ್ಥಿತರಿದ್ದರು.