ದಾವಣಗೆರೆ, ನ.21- ವಾಸ್ಕೋ-ಯಶವಂತಪುರ ಎಕ್ಸ್ಪ್ರೆಸ್ ರೈಲು ಗಾಡಿಯನ್ನು ಪ್ರಸ್ತುತ ಯಶವಂತ ಪುರದಿಂದ ಬೆಂಗಳೂರುವರೆಗೆ ವಿಸ್ತರಿಸಿ, ವಾರಪೂರ್ತಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಆಗಿ ಪರಿವರ್ತಿಸಿ ಓಡಿಸುವುದರಿಂದ ದಾವಣಗೆರೆ ಹಾಗೂ ಹರಿಹರದ ರೈಲು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ನೈರುತ್ಯ ರೈಲ್ವೇ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ರೈಲ್ವೇ ಬೋರ್ಡ್ ಛೇರ್ಮನ್ ಅವರಿಗೆ ವಿನಂತಿಸಿದ್ದಾರೆ.
February 24, 2025