ದಾವಣಗೆರೆ, ನ.17- ರಾಜ್ಯ ಸರ್ಕಾರವು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲು ನಿರ್ಧಾರ ಕೈಗೊಂಡಿರುವ ಕ್ರಮವನ್ನು ಬಂಡಾಯ ಸಾಹಿತ್ಯ ಸಂಘಟನೆ ತೀವ್ರವಾಗಿ ವಿರೋಧಿಸಿದೆ.
ಮರಾಠ ಮತದಾರರ ಮನ ಒಲಿಸಲು ಒಂದು ಪ್ರಾಧಿಕಾರವನ್ನೇ ಸ್ಥಾಪಿಸುವುದು ಅತಾತ್ವಿಕ ಮತ್ತು ಅನೈತಿಕ ನಡೆಯಾಗಿದೆ. ಬೆಳ ಗಾವಿಯಂತಹ ಗಡಿನಾಡಿನಲ್ಲಿ ಕನ್ನಡ ರಾಜ್ಯೋ ತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಿ ಕರ್ನಾಟಕ ಏಕೀಕರಣದ ಆಶಯವನ್ನು ಪ್ರಶ್ನಿಸುವ ಮರಾಠಿಗರು ಇರುವಾಗ ಇಂತಹ ಪ್ರಾಧಿಕಾರದ ಸ್ಥಾಪನೆ ಪ್ರಶ್ನಾರ್ಹವಾಗಿದೆ.
ಅಭಿವೃದ್ಧಿ ಹೆಸರಿನಲ್ಲಿ ಉಪ ಚುನಾವಣೆ ಹೊಸ್ತಿಲಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ತಪ್ಪು ಹೆಜ್ಜೆ. ಕೂಡಲೇ ಈ ನಿರ್ಧಾರವನ್ನು ವಾಪಾಸ್ ಪಡೆಯಬೇಕೆಂದು ಸಂಘಟನೆಯ ಬರಗೂರು ರಾಮಚಂದ್ರಪ್ಪ, ಡಾ.ಜಿ. ರಾಮಕೃಷ್ಣ, ಸಿದ್ಧನಗೌಡ ಪಾಟೀಲ್, ಕೆ.ಶರೀಫಾ, ಸುಕನ್ಯಾ, ಭಕ್ತರಹಳ್ಳಿ ಕಾಮರಾಜ್, ಆರ್.ಜಿ. ಹಳ್ಳಿ ನಾಗರಾಜ್, ಜಿ.ರಾಜಶೇಖರಮೂರ್ತಿ, ಎಸ್.ವೈ. ಗುರುಶಾಂತ್, ಟಿ.ಆರ್. ಚಂದ್ರಶೇಖರ್ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.