ದಾವಣಗೆರೆ, ಆ. 9 – ಕೇಂದ್ರದ ಬಿಜೆಪಿ ಸರ್ಕಾರದಿಂದ ದೇಶದ ಯುವ ಜನತೆ ನಿರುದ್ಯೋಗ ಸೃಷ್ಟಿ ಮಾಡಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ವತಿಯಿಂದ ಉದ್ಯೋಗ ಕೊಡಿ ಅಭಿಯಾನವನ್ನು ಪ್ರಾರಂಭಿಸಲಾಯಿತು.
ಭಾರತೀಯ ಯುವ ಕಾಂಗ್ರೆಸ್ ಫೌಂಡೇಶನ್ ದಿನವಾದ ಇಂದು ಹಮ್ಮಿಕೊಂಡಿರುವ ಈ ಅಭಿ ಯಾನವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯೊಂದಿಗೆ ಆರಂಭಿಸಿತು. ಪಕ್ಷದ ಕಚೇರಿಯಲ್ಲಿ ಈ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ಸರ್ಕಾರಿ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡ ಬೇಕು. ರೈಲ್ವೆ ಮತ್ತು ಇತರ ಸರ್ಕಾರಿ ಸಂಸ್ಥೆಗಳ ಖಾಸಗೀ ಕರಣ ನಿಲ್ಲಿಸಬೇಕು. ಕೊರೊನಾ ಅವಧಿ ಯಲ್ಲಿ ನಿರುದ್ಯೋಗಿ ಯುವಕರಿಗೆ ಆರ್ಥಿಕ ಸಹಾಯ ಸಿಗುವಂತೆ ಮಾಡಬೇಕು. ಸರ್ಕಾರಿ ಇಲಾಖೆಗಳಲ್ಲಿ ಹುದ್ದೆಗಳನ್ನು ರದ್ದುಗೊಳಿ ಸಲು ನಿರ್ಬಂಧಗಳಿವೆ. ನ್ಯಾಯಾ ಲಯದ ಪ್ರಕರಣದಲ್ಲಿ ಸಿಲುಕಿರುವ ಸರ್ಕಾರಿ ನೇಮಕಾತಿಗಳನ್ನು ತ್ವರಿತವಾಗಿ ಎದುರಿಸಬೇಕು. ಈ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಲು ಯುವ ಕಾಂಗ್ರೆಸ್ ಆಗ್ರಹಿಸಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ವಿಪ ನಾಯಕ ಎ. ನಾಗರಾಜ್, ರಾಷ್ಟೀಯ ಸಂಚಾಲಕ ಸೈಯದ್ ಖಾಲೀದ್ ಅಹಮದ್, ಯುವ ಕಾಂಗ್ರೆಸ್ ರಾಷ್ಟೀಯ ವಕ್ತಾರ ಹೆಚ್.ಜೆ. ಮೈನುದ್ದೀನ್, ಯುವ ಕಾಂಗ್ರೆಸ್ ದಕ್ಷಿಣ ವಿಧಾನ ಸಭಾ ಅಧ್ಯಕ್ಷ ಮೊಹಮ್ಮದ್ ಸಾದಿಕ್ ಸದ್ದಾಂ ಸೇರಿದಂತೆ ಇತರರು ಭಾಗವಹಿಸಿದ್ದರು.