ಹರಿಹರ ತಾ|| ನಲ್ಲಿ 35 ವ್ಯಕ್ತಿಗಳಿಗೆ ಕೊರೊನಾ ರೋಗ ಲಕ್ಷಣ

ಹರಿಹರ, ಆ. 3 – ನಗರದಲ್ಲಿ 25 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 10 ಸೇರಿದಂತೆ ಒಟ್ಟು 35 ವ್ಯಕ್ತಿಗಳಿಗೆ ಇಂದು ಕೊರೊನಾ ರೋಗ ಲಕ್ಷಣಗಳು ಹರಡಿರುವ ವರದಿ ಬಂದಿದೆ ಎಂದು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ತಿಳಿಸಿದರು.

ನಗರ ಮತ್ತು ಗ್ರಾಮೀಣ ಪ್ರದೇಶವು ಸೇರಿ ಇಲ್ಲಿಯವರೆಗೆ 413 ವ್ಯಕ್ತಿಗೆ ಕೊರೊನಾ ಸೋಂಕು ಹರಡಿದ್ದು, 270 ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಹೋಂ ಐಸೋಲೇಷನ್ 79 ಕೋವಿಡ್ ಕೇರ್ ಸೆಂಟರ್‍ನಲ್ಲಿ 114 ದಾವಣಗೆರೆ ಸಿ.ಜೆ. ಆಸ್ಪತ್ರೆಯಲ್ಲಿ 117 ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 87 ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ 153 ಕಂಟೈನ್ಮೆಂಟ್ ಝೋನ್ ಇದ್ದು, ಅದರಲ್ಲಿ 38 ಕಂಟೈನ್ಮೆಂಟ್ ಝೋನ್‍ಗಳ ಅವಧಿಯು ಮುಕ್ತವಾಗಿ ಇಂದಿಗೆ 115 ಕಂಟೈನ್ಮೆಂಟ್ ಝೋನ್ ಗಳು ಇವೆ. ಆ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಅಗತ್ಯ ವಸ್ತುಗಳನ್ನು ಪೂರೈಸಲು ವ್ಯವಸ್ಥೆ ಮಾಡಲಾಗಿದೆ.  ನಗರದ ಜೆ.ಸಿ. ಬಡಾವಣೆ, ಎ.ಕೆ. ಕಾಲೋನಿ, ಕಾಳಿದಾಸ ನಗರ, ಮೋಚಿ ಕಾಲೋನಿ, ಸುಣಗಾರ ಬೀದಿ, ಮಜ್ಜಿಗೆ ಬಡಾವಣೆ, ಹರ್ಲಾಪುರ, ಬೈಪಾಸ್, ವಿದ್ಯಾನಗರ, ದೇವಸ್ಥಾನ ರಸ್ತೆ, ಜೆ.ಪಿ. ನಗರ ಗುತ್ತೂರು, ಕೆ. ಆರ್. ನಗರ, ಶಿಬಾರ ವೃತ್ತ, ವಿಜಯನಗರ ಬಡಾವಣೆ, ಹೈಸ್ಕೂಲ್ ಬಡಾವಣೆ, ತರಕಾರಿ ಮಾರುಕಟ್ಟೆ ಸೇರಿದಂತೆ ನಗರದ ಹಲವಾರು ಬಡಾವಣೆಯಲ್ಲಿ ಕೊರೊನಾ ಸೋಂಕು ಹರಡಿಕೊಂಡಿದೆ ಎಂದು ಹೇಳಿದರು.

ಕೊರೊನಾ ಹರಡಿರುವ ಸ್ಥಳಕ್ಕೆ ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಸಿಪಿಐ ಎಸ್. ಶಿವಪ್ರಸಾದ್, ಪೌರಾಯುಕ್ತರಾದ ಎಸ್. ಲಕ್ಷ್ಮಿ ಭೇಟಿ ನೀಡಿದ್ದರು.

error: Content is protected !!