ಶಿವಮೊಗ್ಗ,ಆ.3- ಮಲೆನಾಡಿನಲ್ಲಿ ಕ್ಷೀಣಿಸಿದ್ದ ಮಳೆ ಭಾನುವಾರದಿಂದ ಮತ್ತೆ ಪ್ರಾರಂಭವಾಗಿದ್ದು, ಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಿದೆ.
ಭಾನುವಾರ 1468 ಕ್ಯೂಸೆಕ್ಸ್ ಇದ್ದ ಒಳಹರಿವು ಸೋಮವಾರ 2683 ಕ್ಯೂಸೆಕ್ಸ್ಗೆ ಏರಿಕೆಯಾಗಿದ್ದು, ಅಚ್ಚುಕಟ್ಟಿನ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಹವಾಮಾನ ಇಲಾಖೆಯ ಮುಂದಿನ 5 ದಿನಗಳ ಕಾಲ ಮಲೆನಾಡಿನಲ್ಲಿ ಉತ್ತಮ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿರುವುದು ಸಮಾಧಾನದ ವಿಷಯವಾಗಿದೆ.
ಇದರ ಮಧ್ಯೆ ಸೋಮವಾರ ಶಿವಮೊಗ್ಗದಲ್ಲಿ ಮುಖ್ಯ ಇಂಜಿನಿಯರ್ ಸಭೆ ನಡೆಸಿದ್ದಾರೆಂಬ ಮಾತು ಕೇಳಿ ಬಂದಿದ್ದು, ನಿಖರವಾದ ಮಾಹಿತಿ ಲಭ್ಯವಾಗಿಲ್ಲ.