ಹರಪನಹಳ್ಳಿ, ಆ.2- ತಾಲ್ಲೂಕಿನಲ್ಲಿ ಭಾನುವಾರ 19 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.
ಪಟ್ಟಣದಲ್ಲಿ 8 ಜನರಿಗೆ ಹಾಗೂ ಗ್ರಾಮೀಣ ಭಾಗದಲ್ಲಿ 11 ಜನರಿಗೆ ಸೋಂಕು ಆವರಿಸಿದೆ. ಪಟ್ಟಣದ ತೆಲುಗರ ಓಣಿಯಲ್ಲಿ 20 ಹಾಗೂ 19 ವರ್ಷದ ವ್ಯಕ್ತಿಗಳು, 43 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಇವರಿಗೆ 7 ಜನರನ್ನು ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ.
ಬಾಪೂಜಿ ನಗರದಲ್ಲಿ 45 ವರ್ಷದ ಎಲ್ಐಸಿ ಉದ್ಯೋಗಿಯೊಬ್ಬರಿಗೆ ಸೋಂಕು ತಗುಲಿದೆ, ಕಾಶಿಮಠದ ಹತ್ತಿರ 27 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದ್ದು, ಈತನಿಗೆ ಓರ್ವ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ.
ಪಟ್ಟಣದ ಆಚಾರಿ ಬಡಾವಣೆಯ 51 ವರ್ಷದ ಪುರುಷನಿಗೆ ಸೋಂಕು ದೃಢವಾಗಿದ್ದು, ಪಟ್ಟಣದ ಹಡಗಲಿ ರಸ್ತೆಯಲ್ಲಿ ವಾಸವಿರುವ 55 ವರ್ಷದ ಪುರುಷನಿಗೆ ಸೋಂಕು ಆವರಿಸಿದೆ. ಮೇಗಳಪೇಟೆಯ ಕೆಂಪೇಶ್ವರ ದೇವಸ್ಥಾನದ ಹಿಂಭಾಗ ವಾಸವಿರುವ 65 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.
ಅರಸಿಕೇರಿ ಪೊಲೀಸ್ ಠಾಣೆಯಲ್ಲಿ 32 ವರ್ಷದ ಪೇದೆಯೊಬ್ಬರಿಗೆ ಸೋಂಕು ಪತ್ತೆಯಾಗಿದೆ, ಇವರ ಊರು ಮಾಚಿಹಳ್ಳಿ ತಾಂಡವಾಗಿದ್ದು, ಇವರು ರಜೆ ಮೇಲಿದ್ದು, 3 ದಿನಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿದ್ದರು. ಇವರಿಗೆ 7 ಜನ ಪ್ರಾಥಮಿಕ ಹಾಗೂ 8 ಜನ ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದೆ.
ಕಂಚಿಕೇರಿ ಗ್ರಾಮದಲ್ಲಿ ಒಟ್ಟು ಮೂವರಿಗೆ ಸೋಂಕು ದೃಢವಾಗಿದ್ದು, ಅದರಲ್ಲಿ ಮೊದಲಿಗೆ 25 ವರ್ಷದ ಪುರುಷನಿಗೆ ಕಾಣಿಸಿಕೊಂಡಿದ್ದು, ಈತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲವಾಗಿದೆ, 11 ಜನ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ. ಎರಡನೇಯದಾಗಿ 57 ವರ್ಷದ ವ್ಯಕ್ತಿಗೆ ಸೋಂಕು ಆವರಿಸಿದೆ, ಈತನಿಗೆ ಇಬ್ಬರು ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ. ಇನ್ನು ಮೂರನೇಯದಾಗಿ ಕಂಚಿಕೇರಿಯಲ್ಲಿ 80 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಈ ಮಹಿಳೆಗೆ 2 ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ.
ಮೈದೂರು ಗ್ರಾಮದಲ್ಲಿ ವಾಸವಿರುವ 32 ವರ್ಷದ ಎಸ್‌ಬಿಐ ಬ್ಯಾಂಕ್ ಉದ್ಯೋಗಿಗೆ ಸೋಂಕು ಕಾಣಿಸಿಕೊಂಡಿದೆ. ಇವರಿಗೆ 6 ಜನ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ.
ಕಾನಹಳ್ಳಿ ಗ್ರಾಮದಲ್ಲಿ ವಾಸವಿದ್ದು, ಹಡಗಲಿಯ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 55 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ಇವರಿಗೆ 12 ಜನರನ್ನು ಪ್ರಾಥಮಿಕ ಸಂಪರ್ಕಿತರೆಂದು ಗುರುತಿಸಲಾಗಿದೆ.
ಮತ್ತಿಹಳ್ಳಿ ಗ್ರಾಮದಲ್ಲಿ 27 ವರ್ಷದ ಗರ್ಭಿಣಿ ಯೊಬ್ಬರಿಗೆ ಸೋಂಕು ದೃಢವಾಗಿದ್ದು, ಈ ಮಹಿಳೆಗೆ 7 ಪ್ರಾಥಮಿಕ ಹಾಗೂ 9 ಜನ ದ್ವಿತೀಯ ಸಂಪ ರ್ಕಿತರನ್ನು ಶಿಕ್ಷಣ ಇಲಾಖೆಯವರು ಗುರುತಿಸಿ, ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ತೆಲಗಿ, ತಿಮ್ಲಾಪುರ ಗ್ರಾಮಗಳಲ್ಲಿ ಒಟ್ಟು ಮೂರು ಜನರಿಗೆ ಸೋಂಕು ಕಾಣಿಸಿಕೊಂಡಿದೆ. 30 ವರ್ಷದ ಮಹಿಳೆಗೆ ಹಾಗೂ 24 ವರ್ಷದ ಪುರುಷ ಮತ್ತು 19 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ.