ಮಲೇಬೆನ್ನೂರಿನಲ್ಲಿ ಸಂಭ್ರಮದ ರಾಜ್ಯೋತ್ಸವ

ಮಲೇಬೆನ್ನೂರು, ನ.1- ಪಟ್ಟಣದಲ್ಲಿ ವಿವಿಧೆಡೆ 65ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಜಿಗಳಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ಧ್ವಜಾರೋಹಣ ನೆರವೇರಿಸಲಾ ಯಿತು. ಕರವೇ ಅಧ್ಯಕ್ಷ ಎಳೆಹೊಳೆ ಕುಮಾರ್, ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಎಪಿಎಂಸಿ ಸದಸ್ಯ ಜಿ.ಮಂಜುನಾಥ್ ಪಟೇಲ್, ಕರವೇ ಕಾರ್ಯದರ್ಶಿ ಗಾಂಧಿ, ಗುಡ್ಡಪ್ಪ, ರಾಜು, ಮಂಜು, ನ್ಯಾಯಬೆಲೆ ಅಂಗಡಿ ಮಂಜಣ್ಣ, ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿ ವಂದನೆ ಸಲ್ಲಿಸಿದರು.

ವಾಲ್ಮೀಕಿ ಬಡಾವಣೆಯಲ್ಲಿರುವ ಚೌಡೇಶ್ವರಿ ಯುವಕ ಸಂಘದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉದ್ಯಮಿ ನಂದಿಗಾವಿ ಶ್ರೀನಿವಾಸ್ ಅವರು ಧ್ವಜಾರೋಹಣ ನೆರವೇರಿಸಿದರು. ದೊಡ್ಮನಿ ಬಸವರಾಜ್, ಮನೋಹರ್, ಅರವಿಂದ್, ನಾಗರಾಜ್, ಮಹಾಂತೇಶ್, ಹನುಮಂತ ಸೇರಿದಂತೆ ಬಡಾವಣೆಯ ನಿವಾಸಿಗಳು ಈ ವೇಳೆ ಹಾಜರಿದ್ದರು.

ಪುರಸಭೆ ಕಾರ್ಯಾಲಯ ಮತ್ತು ಮುಖ್ಯ ವೃತ್ತದಲ್ಲಿ ಭುವನೇಶ್ವರಿ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸ ಲಾಯಿತು. 

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಪುರ ಸಭೆ ಸದಸ್ಯರಾದ ಬಿ. ಸುರೇಶ್, ಎ. ಆರೀಫ್ ಅಲಿ, ಯುಸೂಫ್, ಮಾಸಣಗಿ ಶೇಖರಪ್ಪ, ಮಹಾಲಿಂಗಪ್ಪ, ಮಹಾಂತೇಶಸ್ವಾಮಿ, ಕನ್ನಡ ಸಂಘದ ಜೆ. ನಾಗಭೂಷಣ್, ಕೆ.ಜಿ. ಲೋಕೇಶ್, ಭೋವಿ ಕುಮಾರ್, ಫಕೃದ್ಧೀನ್, ಪುರಸಭೆ ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ನವೀನ್, ಗಣೇಶ್, ಪ್ರಭು ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು.

ನಾಡ ಕಛೇರಿಯಲ್ಲೂ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಉಪತಹಶೀಲ್ದಾರ್‌ ಆರ್. ರವಿ, ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಸುಭಾನಿ, ಸಿಬ್ಬಂದಿಗಳಾದ ಅಂಜಿನಪ್ಪ, ಬಸವರಾಜ್ ಪಾಲ್ಗೊಂಡಿದ್ದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಭಾರಿ ಅಧ್ಯಕ್ಷ ಎ.ಕೆ. ನರಸಿಂಹಪ್ಪ, ನಿರ್ದೇಶಕರಾದ ಜಿ. ಮಂಜುನಾಥ್ ಪಟೇಲ್, ಕೆ.ಜಿ. ಪರಮೇಶ್ವರಪ್ಪ, ಸಿಇಓ ಸಿದ್ದಪ್ಪ, ಕೆ. ಬಸವರಾಜ್, ಲಯನ್ಸ್‌ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್‌ ಭಾಗವಹಿಸಿದ್ದರು.

ಸರ್ಕಾರಿ ಪದವಿ ಪೂರ್ವ ಕಾಲೇಜು, ಲಯನ್ಸ್ ಕ್ಲಬ್, ಎಸ್‌ಬಿಕೆಎಂ ಶಾಲೆ, ಬೀರಲಿಂಗೇಶ್ವರ ವಿದ್ಯಾಸಂಸ್ಥೆ, ರೈತ ಸಂಪರ್ಕ ಕೇಂದ್ರ, ಪೊಲೀಸ್‌ ಠಾಣೆ, ನೀರಾವರಿ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ, ಮಾಲತೇಶ್‌ ಸ್ಕೂಲ್ ಮತ್ತಿತರೆ ಕಡೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

error: Content is protected !!