ಮಲೇಬೆನ್ನೂರಿನ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ ನ.6ಕ್ಕೆ ಚುನಾವಣೆ

ಮಲೆಬೇನ್ನೂರು, ಅ.30 – ಇಲ್ಲಿನ ಪುರಸ ಭೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ನವೆಂಬರ್ 6 ರಂದು ಚುನಾವಣೆ ನಿಗದಿ ಮಾಡಿ, ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಪುರಸಭೆ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಸರ್ಕಾರ ನಿಗದಿಗೊಳಿಸಿದ್ದು, ಆ ಪ್ರಕಾರ ಚುನಾವಣೆ ಪುರಸಭೆ ಸಭಾಂಗಣದಲ್ಲಿ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಒಟ್ಟು 23 ಸದಸ್ಯರಿದ್ದು ಕಾಂಗ್ರೆಸ್ -9, ಬಿಜೆಪಿ-7, ಜೆಡಿಎಸ್-5 ಮತ್ತು ಪಕ್ಷೇತರರು ಇಬ್ಬರು ಇದ್ದಾರೆ. ಪುರಸಭೆಯಲ್ಲಿ ಇದುವರೆಗೂ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಕಳೆದ ಅವಧಿಯ 30 ತಿಂಗಳು ಅಧಿಕಾರ ನಡೆಸಿದ್ದರು. ಆಗ ಅಧ್ಯಕ್ಷ ಸ್ಥಾನ ಜೆಡಿಎಸ್‍ಗೆ ಆಗಿತ್ತು ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಆಗಿತ್ತು. ಈ ಹಿಂದಿನ ಒಪ್ಪಂದದಂತೆ ಈಗ ಬಿಜೆಪಿಗೆ ಅಧ್ಯಕ್ಷ ಸ್ಥಾನ ಮತ್ತು ಜೆಡಿಎಸ್‍ಗೆ ಉಪಾಧ್ಯಕ್ಷ ಸ್ಥಾನ ಎಂದು ಹೇಳಲಾಗುತ್ತಿದೆ.

ಈ ನಡುವೆ ಹರಿಹರ ನಗರಸಭೆಯಲ್ಲಿ ಜೆಡಿ ಎಸ್‍ – ಕಾಂಗ್ರೆಸ್ ಹೊಂದಾಣಿಕೆ ಆಗಿದ್ದು ಮಲೇ ಬೆನ್ನೂರು ಪುರಸಭೆಯಲ್ಲೂ ಅದೇ ರೀತಿ ಆದರೂ ಅಚ್ಚರಿ ಇಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಆಗಿರುವುದರಿಂದ ಮೂರೂ ಪಕ್ಷಗಳಿಂದ 12 ಮಹಿಳೆಯರಿದ್ದು ಕಾಂಗ್ರೆಸ್ ಪಕ್ಷದಲ್ಲಿ 6, ಬಿಜೆಪಿ ಮತ್ತು ಜೆಡಿಎಸ್‍ನಲ್ಲಿ ತಲಾ ಮೂವರು ಇದ್ದಾರೆ.

ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲು ಆಗಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ತಲಾ ಒಬ್ಬರಿದ್ದಾರೆ.

ಜೆಡಿಎಸ್‍ ಪಕ್ಷದಲಿರುವ ಶ್ರೀಮತಿ ಅಂಜಿ ನಮ್ಮ ವಿಜಯ್‍ಕುಮಾರ್ ಅವರು ಈಗಾಗಲೇ 30 ತಿಂಗಳು ಅಧ್ಯಕ್ಷರಾಗಿದ್ದವರು, ಕಾಂಗ್ರೆಸ್ ಪಕ್ಷದಲ್ಲಿ ಶ್ರೀಮತಿ ಮಂಜುಳಾ ಭೋವಿಕುಮಾರ್ ಅವರು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ-ಜೆಡಿಎಸ್ ಒಂದಾದರೆ ಅಂಜಿನಮ್ಮ  ಮತ್ತೆ ಉಪಾಧ್ಯಕ್ಷರಾದರೂ ಆಶ್ಚರ್ಯವಿಲ್ಲ.

error: Content is protected !!