ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆ ಮಾಡದಂತೆ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಆಗ್ರಹ
ದಾವಣಗೆರೆ, ಜು. 25 – ಕೋವಿಡ್-19 ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಲ್ಲಿರುವ ಎಲ್ಲಾ ಹೋಟೆಲ್ಗಳಲ್ಲಿ ಬಿಸಿ ನೀರು ವಿತರಿಸಬೇಕೆಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಒತ್ತಾಯಿಸಿದ್ದಾರೆ.
ಎಲ್ಲಾ ಹೋಟೆಲ್ ಮಾಲೀಕರು ತಮ್ಮ-ತಮ್ಮ ಹೋಟೆಲ್ಗಳಲ್ಲಿ ತಣ್ಣೀರು ವಿತರಿಸು ತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸಮುದಾಯಕ್ಕೆ ಹಬ್ಬುತ್ತಿದ್ದು, ಕಡ್ಡಾಯವಾಗಿ ಇನ್ನು ಮುಂದೆ ಬಿಸಿ ನೀರು ವಿತರಿಸಲು ಕ್ರಮ ಕೈಗೊಳ್ಳಬೇಕು. ಮಹಾನಗರ ಪಾಲಿಕೆ ಅಧಿಕಾರಿಗಳು ಸಹ ಹೋಟೆಲ್ ಮಾಲೀಕರು ಗಳಿಗೆ ಸೂಚಿಸಬೇಕೆಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಸ್ಥರಿದ್ದು, ಕಳೆದ 2-3 ದಿನಗಳಿಂದ ಬೀದಿಬದಿ ವ್ಯಾಪಾರಸ್ಥರಿಗೆ ಕೆಲವು ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಪ್ರತಿನಿತ್ಯ ದುಡಿದು ಜೀವನ ನಡೆಸುವ ಜನರಿಗೆ ಸಾಕಷ್ಟು ಅನಾನುಕೂಲವಾಗುತ್ತಿದೆ ಎಂದು ಅವರು ಆಡಳಿತದ ಗಮನ ಸೆಳೆದಿದ್ದಾರೆ.
ಕಳೆದ 2-3 ತಿಂಗಳು ಲಾಕ್ಡೌನ್ನಿಂದಾಗಿ ಬೀದಿಗೆ ಬಂದಿದ್ದ ಜೀವನ ಇದೀಗ ಸುಧಾರಣೆ ಕಾಣಲು ಪ್ರತಿನಿತ್ಯ ಜೀವನಕ್ಕೆ ಮುಂದಾಗುತ್ತಿ ರುವ ವೇಳೆಯೇ ಅಧಿಕಾರಿಗಳು ಬೀದಿ ಬದಿ ವ್ಯಾಪಾರಸ್ಥರಿಗೆ ಸಂಜೆ 6 ಗಂಟೆಗೆ ಬಂದ್ ಮಾಡಲು ಸೂಚಿಸಿದ್ದನ್ನು ಅವರು ಖಂಡಿಸಿದ್ದಾರೆ.
ಬೀದಿ ಬದಿಯಲ್ಲಿ ಸಂಜೆ 5-30 ರಿಂದ ವ್ಯಾಪಾರ ಆರಂಭಗೊಳ್ಳಲಿದೆ. ಅಧಿಕಾರಿಗಳ ಸೂಚನೆಯಿಂದ ಬೀದಿಬದಿ ವ್ಯಾಪಾರಸ್ಥರು ಭಯದ ವಾತಾವರಣದಲ್ಲಿ ಬದುಕುವಂತಾ ಗಿದ್ದು, ಜಿಲ್ಲಾಡಳಿತವು ಮಧ್ಯೆ ಪ್ರವೇಶಿಸಿ ಬೀದಿ ಬದಿ ವ್ಯಾಪಾರಸ್ಥರಿಗೆ ಸರ್ಕಾ ರದ ನಿಯಮದಂತೆ ರಾತ್ರಿ 9 ರವರೆಗೂ ವ್ಯಾಪಾರ ಮಾಡಲು ಅವ ಕಾಶ ನೀಡಬೇಕು ಎಂದವರು ಆಗ್ರಹಿಸಿದ್ದಾರೆ.