ಚಳ್ಳಕೆರೆ, ಅ.23- ಸದಾಶಿವ ಆಯೋಗ ಜಾರಿಗೆ ಮತ್ತು ಒಳ ಮೀಸಲಾತಿ ಗಾಗಿ ಒತ್ತಾಯಿಸಿ ಮಾದಿಗ ಸಮುದಾ ಯದಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಸಿ.ಕೆ. ಮಹೇಶ್ ಅವರು, ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಮಾದಿಗ ಜನಾಂ ಗಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಮತ್ತು ಮಿಸಲಾತಿ ಸಿಕ್ಕಿಲ್ಲ ಎಂದು ದೂರಿದರು. ಈ ಕೂಡಲೇ ಸರಿಯಾದ ರೀತಿಯಲ್ಲಿ ಸೌಲಭ್ಯ ಕಲ್ಪಿಸಿ, ಜನಾಂಗಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಕಾಂ. ಶಿವರುದ್ರಪ್ಪ ಮಾತನಾಡಿ, ಮಾದಿಗ ಜನಾಂಗ ತುಳಿತಕ್ಕೆ ಒಳಗಾಗಿದ್ದು, ಸರಿಯಾದ ರಕ್ಷಣೆ ಇಲ್ಲದಂತಾಗಿದೆ ಎಂದರು.
ಪ್ರತಿಭಟನೆಯಲ್ಲಿ ಹೆಚ್. ಸಮರ್ಥರಾಯ್, ವಿಜಯಕುಮಾರ್, ಡಿ. ಚಂದ್ರು, ಚಳ್ಳಕೇರಪ್ಪ, ಕೆ. ವೀರಭದ್ರಯ್ಯ, ಪ್ರಕಾಶಮೂರ್ತಿ, ಸಿದ್ದಾಪುರ ಶೇಖರಪ್ಪ, ಸುಮ, ವಿಜಯಲಕ್ಷ್ಮಿ, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಕೆಇಬಿ ತಿಪ್ಪೇರುದ್ರಪ್ಪ, ತಿರುಮಲೇಶ್ ಮತ್ತಿತರರಿದ್ದರು.