ಎಸ್.ಎಸ್. ನಾರಾಯಣ ಹೃದಯಾಲಯದಲ್ಲಿ ಲಾಕ್‌ಡೌನ್‌ ವೇಳೆಯೂ 309 ಮಂದಿಗೆ ಚಿಕಿತ್ಸೆ

ದಾವಣಗೆರೆ, ಜು. 18- ಇಲ್ಲಿನ ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್‌ನಲ್ಲಿ ಜೂನ್ ತಿಂಗಳ ಲಾಕ್‌ಡೌನ್‌ ವೇಳೆಯಲ್ಲಿಯೂ 309 ಮಂದಿಗೆ ಹೃದ್ರೋಗಿಗಳಿಗೆ ಯಶಸ್ವೀ ಚಿಕಿತ್ಸೆ ನೀಡಲಾಗಿದೆ.

309 ಪ್ರಕರಣಗಳ ಪೈಕಿ ಹೃದಯ ರೋಗ ತಜ್ಞರು 18 ರೋಗಿಗಳಿಗೆ ಪ್ರಾಥಮಿಕ ಆಂಜಿಯೋಪ್ಲಾಸ್ಟಿ ನಡೆಸಿದ್ದಾರೆ. 111 ಮಂದಿಗೆ ಪಿಟಿಸಿಎ (ಪರ್ಕ್ಯುಟೇನಿಯಸ್ ಟ್ರಾನ್ಸ್ಯೂಮಿನಲ್ ಕರೋನರಿ ಆಂಜಿಯೋಪ್ಲಾಸ್ಟಿ) ಮತ್ತು 16 ಮಂದಿಗೆ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದರ ಜೊತೆಗೆ 1000ಕ್ಕೂ ಹೆಚ್ಚು ರೋಗಿಗಳಿಗೆ ಒಪಿಡಿ ಘಟಕದಲ್ಲಿ ಹೃದಯ ತಪಾಸಣೆ ನಡೆಸಲಾಗಿದೆ.

ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್‌ನ ಹಿರಿಯ ಹೃದ್ರೋಗ ತಜ್ಞ ವೈದ್ಯ ಡಾ.ಮಲ್ಲೇಶ್ ಪಿ., ಕೊರೊನಾ ಸೋಂಕು ಇರುವ ಪ್ರಸ್ತುತ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಅಗತ್ಯವಿ ರುವ ಹೃದ್ರೋಗಿಗಳಿಗೆ ಚಿಕಿತ್ಸೆ ನೀಡುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು ಎಂದರು.

ಫೆಸಿಲಿಟಿ ಡೈರೆಕ್ಟರ್ ಸುನಿಲ್ ಭಂಡಾರಿ ಮಾತನಾಡಿ, ಸಕಾಲಿಕ ರೋಗ ಪತ್ತೆ, ಚಿಕಿತ್ಸೆ ಮತ್ತು ಆರೈಕೆ ಪಡೆಯದಿದ್ದರೆ ಅದು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಇದು ತೀವ್ರ ಅಸ್ವಸ್ಥತೆ ಅಥವಾ ಸಾವಿಗೂ ಕಾರಣವಾಗಬಹುದು. ಈ ತಿಳಿವಳಿಕೆಯಿಂದ ಮತ್ತು ಆಸ್ಪತ್ರೆಯ ಆಡಳಿತ ವರ್ಗ ಹಾಗೂ ಸಿಬ್ಬಂದಿ ವರ್ಗ  ಪ್ರತಿಕೂಲಗಳ ವಿರುದ್ಧ ಹೋರಾಡಿ ರೋಗಿಗಳಿಗೆ ನೆರವು ನೀಡಿದ್ದಾರೆ. ಚಿಕಿತ್ಸೆ ವೇಳೆ ಎಲ್ಲಾ ಸುರಕ್ಷಾ ಕ್ರಮಗಳನ್ನು ಪಾಲಿಸಲಾಗುತ್ತಿದೆ ಎಂದು ಹೇಳಿದರು.

ಎಸ್.ಎಸ್. ನಾರಾಯಣ ಹೃದಯ ಕೇಂದ್ರವು ದಾವಣಗೆರೆಯಲ್ಲಿ ಹೃದ್ರೋಗ ಚಿಕಿತ್ಸೆಗೆ ಮೀಸಲಾದ ಮೊಟ್ಟ ಮೊದಲ ಎನ್.ಎ.ಬಿ.ಹೆಚ್. ಮಾನ್ಯತೆ  ಪಡೆದ  ಹೃದಯ ಕೇಂದ್ರವಾಗಿದ್ದು. ಅತ್ಯಾ ಧುನಿಕ ಸಾಧನೆ, ಸಲಕರಣೆಗಳಿಂದ ಕೂಡಿದೆ. 

error: Content is protected !!