ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಎಸ್‌ಎಫ್‌ಐನಿಂದ ಪ್ರತಿಭಟನೆ

ದಾವಣಗೆರೆ, ಜು.11- ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ವಿದ್ಯಾರ್ಥಿ ಸಮುದಾಯ ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲು ಆಗ್ರಹಿಸಿ ಹಾಗೂ ವಿವಿಧ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನಾ ಮನವಿ ಸಲ್ಲಿಸಿತು.

ಪರೀಕ್ಷೆಗಳನ್ನು ರದ್ದುಪಡಿಸಬೇಕು, ಸರ್ಕಾರ ಆರು ತಿಂಗಳ ಎಲ್ಲಾ ಶೈಕ್ಷಣಿಕ ಶುಲ್ಕಗಳನ್ನು ಮನ್ನಾ ಮಾಡಬೇಕು, ಮಕ್ಕಳು ಹಸಿವಿನಿಂದ ನರಳುವುದನ್ನು ನಿಲ್ಲಿಸಬೇಕು, ಲಾಕ್‌ಡೌನ್‌ ಸಮಯದಲ್ಲಿ 6 ತಿಂಗಳ ಕಾಲ ಪ್ರತಿ ತಿಂಗಳು ವಿದ್ಯಾರ್ಥಿಗಳ ಕುಟುಂಬಗಳಿಗೆ ಸರ್ಕಾರ 7,500 ರೂಪಾಯಿ ನೀಡಬೇಕು, ಆನ್‌ಲೈನ್ ಶಿಕ್ಷಣ ಕಡ್ಡಾಯ ಬೇಡ, ಡಿಜಿಟಲ್ ಡಿವೈಡ್ ತಡೆಯಬೇಕು, ಫೆಲೋಶಿಫ್ ಶೀಘ್ರವಾಗಿ ವಿತರಿಸಬೇಕು, ಬಾಕಿ ಸಂಬಳ/ಪರಿಹಾರ ಧನ ನೀಡಬೇಕು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸ್ಥಳಾಂತರ ನಿಲ್ಲಬೇಕು, ವೈದ್ಯಕೀಯ ವಿದ್ಯಾರ್ಥಿಗಳ ಬಾಕಿ ಉಳಿಸಿಕೊಂಡಿರುವ ಶಿಷ್ಯವೇತನ ಕೂಡಲೇ ಬಿಡುಗಡೆಯಾಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಇರಿಸಿದೆ.

ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲು ಮುಂದಾಗಬೇಕೆಂದು ರಾಜ್ಯವ್ಯಾಪಿ ಹೋರಾಟ ಮಾಡಿ ಪ್ರತಿಭಟನಾ ಮನವಿ ಮೂಲಕ ಜಿಲ್ಲಾ ಸಮಿತಿ ಒತ್ತಾಯಿಸುವುದಾಗಿ ಸಂಚಾಲಕ ಲಕ್ಷ್ಮಣ್ ರಾಮಾವತ್, ಜಿಲ್ಲಾ ಮುಖಂಡರಾದ ರಾಕೇಶ್, ಸಲ್ಲಾವುದ್ದೀನ್ ಹಾಗೂ ಇನ್ನಿತರರು ತಿಳಿಸಿದ್ದಾರೆ.

error: Content is protected !!