ರಾಣೇಬೆನ್ನೂರು ತಾಲ್ಲೂಕು ಗಡಿ ಬಂದ್

ರಾಣೇಬೆನ್ನೂರು ತಾಲ್ಲೂಕು ಗಡಿ ಬಂದ್ - Janathavaniಯಾರೂ ಬರಬೇಡಿ,  ಹೋಗಲೂಬೇಡಿ: ಶಾಸಕ ಪೂಜಾರ್‌ ಮನವಿ

ರಾಣೇಬೆನ್ನೂರು, ಜು. 13- ನನ್ನ ತಾಲ್ಲೂಕಿಗೆ ಯಾರೂ ಬರಬೇಡಿ,  ನಮ್ಮವರಾರು ಹೊರ ಹೋಗಬೇಡಿ.  ನಿಮ್ಮ ಆರೋಗ್ಯ ನೀವು ಕಾಪಾಡಿಕೊಳ್ಳಿ ಎಂದು ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ್ ಮನವಿ ಮಾಡಿದ್ದಾರೆ.

ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,  ನಿಯಂತ್ರಣಕ್ಕಾಗಿ ನಾಳೆ ದಿ.14 ಮಂಗಳವಾರ ರಾತ್ರಿ 8 ಗಂಟೆ ಯಿಂದ ದಿನಾಂಕ 20ರ ಸೋಮವಾರ ಬೆಳಗಿನ 5 ಗಂಟೆವರೆಗೆ ರಾಣೇಬೆನ್ನೂರು ತಾಲ್ಲೂಕನ್ನು  `ಲಾಕ್‌ಡೌನ್’ ಮಾಡುವ ನಿರ್ಧಾರವನ್ನು ತಮ್ಮ ನಿವಾಸದಲ್ಲಿ ನಡೆಸಿದ  ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಕಳೆದ ಎರಡು ದಿನಗಳಿಂದ ಅಧಿಕಾರಿಗಳು, ವರ್ತಕರು, ಉದ್ಯಮಿಗಳು ಹಾಗೂ ಗಣ್ಯರ ಜೊತೆ ಚರ್ಚಿಸಿ, ಕೊರೊನಾ ತಡೆಗಟ್ಟಲು `ಲಾಕ್ ಡೌನ್’  ಅನಿವಾರ್ಯ ಎನ್ನುವ ನಿರ್ಣಯಕ್ಕೆ ತಾಲ್ಲೂಕಾಡಳಿತ ಬಂದಿದೆ ಎಂದು ಶಾಸಕ ಪೂಜಾರ ಹೇಳಿದರು.

ಔಷಧಿ ಹಾಗೂ ಹಾಲು ಮಾರಾಟಕ್ಕೆ ಮಾತ್ರ ಅವಕಾಶವಿದ್ದು ಉಳಿದಂತೆ ತರಕಾರಿ, ಕಿರಾಣಿ, ಜವಳಿ ಮುಂತಾದ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶವಿಲ್ಲ. ಅನಾವ ಶ್ಯಕವಾಗಿ ಸಂಚರಿಸುವವರ ಮೇಲೆ ನಿರ್ದಾ ಕ್ಷಿಣ್ಯವಾಗಿ ಪೋಲಿಸರು ಕ್ರಮ ಕೈಗೊಳ್ಳಲಿದ್ದಾರೆ. 

ಗಡಿಯಲ್ಲಿ ಬಿಗಿ ಭದ್ರತೆ ಮಾಡಲಾಗಿದ್ದು ನಿಯಮಗಳನ್ನು ಉಲ್ಲಂಘಿಸುವವರ ಮೇಲು ಕ್ರಮ ಜರುಗಿಸಲಾಗುತ್ತದೆ ಎಂದರು.

ನಿಮ್ಮ ರಕ್ಷಣೆ ನಮ್ಮ ಹೊಣೆ. ತಾಲ್ಲೂಕಿನ ಜನತೆಯ ಆರೋಗ್ಯ ಕಾಪಾಡಲು ಕಠಿಣ ನಿಲುವು ತಾಳಲಾಗಿದೆ.  ಜನತೆ ತಾಲ್ಲೂಕು ಆಡಳಿತದ ಜೊತೆಗೆ ಕೈಜೋಡಿಸಿ ಎಂದು ಶಾಸಕರು  ಮನವಿ ಮಾಡಿದರು.

ಹಲಗೇರಿ ಮತ್ತೆ ಲಾಕ್‌ಡೌನ್ :  ಜುಲೈ 1 ರಿಂದ10 ರವರೆಗೆ ಸ್ವಯಂ ಬಂದ್ ಘೋಷಣೆ ಮಾಡಿಕೊಂಡಿದ್ದ ತಾಲ್ಲೂಕಿನ ಹಲಗೇರಿ ಜನತೆ ಮತ್ತೆ ಆಗಸ್ಟ್ 1 ರವರೆಗೆ ಬಂದ್ ಮುಂದುವರೆಸಿಕೊಂಡಿದ್ದಾರೆ.  ಅಲ್ಲಿನ ಜನರ ನಿರ್ಧಾರ ಸ್ವಾಗತಾರ್ಹ ಹಾಗೂ ಅಭಿನಂದನೀಯ ಎಂದು ಶಾಸಕರು ಮೆಚ್ಚುಗೆ ವ್ಯಕ್ತ ಪಡಿಸಿದರು.

error: Content is protected !!