ಭರಮಸಾಗರ, ಜು.13- ಗ್ರಾಮೀಣ ಪ್ರದೇಶದ ಸಣ್ಣ ಸಣ್ಣ ಹಳ್ಳಿಗಳ ರಸ್ತೆ ಅಭಿವೃದ್ಧಿಗಾಗಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ಭರಮಸಾಗರ ಹೋಬಳಿಗೆ ಸೇರಿದ ಅತಿ ಹಿಂದು ಳಿದ ಗ್ರಾಮವಾದ ಪಳಿಕೆಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಮಹಿಳಾ ಸ್ವಸಹಾಯ ಸಂಘ ಗಳಿಗೆ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘದವರಿಗೆ ಸುಮಾರು 16 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದರು.ಅಳವುದರ ಗ್ರಾಮದಲ್ಲಿ 1 ಕೋಟಿ ವೆಚ್ಚದ ಅಳಗವಾಡಿ-ಪಳಿಕೆಹಳ್ಳಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ, ಪಳಿಕೆಹಳ್ಳಿ ಸರ್ಕಾರಿ ಶಾಲಾ ವಲಯದಲ್ಲಿ 31 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮೂರು ಶಾಲಾ ಕಟ್ಟಡಗಳ ಉದ್ಘಾಟನೆ, ಅಳಗವಾಡಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ಗ್ರಂಥಾಲಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದರು.
ನಂತರ ಶಾಸಕರು ಭರಮಸಾಗರಕ್ಕೆ ಭೇಟಿ ನೀಡಿ ಹಳೇ ರಾಷ್ಟ್ರೀಯ ಹೆದ್ದಾರಿಯನ್ನು ವೀಕ್ಷಿಸಿ, ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿ, ಭರಮಸಾಗರ ಕೆರೆಯನ್ನು ಒಂದು ಒಳ್ಳೆಯ ಪ್ರವಾಸಿ ತಾಣವನ್ನಾಗಿಸುವುದಾಗಿ ಹೇಳಿದರು.
ಗ್ರಾಮದ ಹಿರಿಯ ಜೀವ ಡಿ.ವಿ. ಶರಣಪ್ಪ (ಅಜ್ಜೂರು), ಬಿಜೆಪಿ ಘಟಕದ ಅಧ್ಯಕ್ಷ ಚವಳಿಹಳ್ಳಿ ಶೈಲೇಶ್ ಕುಮಾರ್, ಕೊಳಹಾಳ್ ಶರಣಪ್ಪ, ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಸಾಮಿಲ್ ಶಿವಣ್ಣ, ಜಯ್ಯಪ್ಪ, ತಾ.ಪಂ. ಸದಸ್ಯ ಕಲ್ಲೇಶ್, ಪಿಎಸ್‌ಐ ರಾಜು, ಇಂಜಿನಿ ಯರ್ ಕೃಷ್ಣಪ್ಪ, ಪತ್ರಕರ್ತ ಬಿ.ಜೆ. ಅನಂತಪದ್ಮನಾಭ ರಾವ್, ಲಾಯರ್ ಫಣಿಯಪ್ಪ, ಗುತ್ತಿಗೆದಾರ ಯಮ್ಮನಘಟ್ಟೆ ಶಿವು, ವಾಲ್ಮೀಕಿ ಅಭಿವೃದ್ಧಿ ನಿಗಮದ ಲೋಕೇಶ್, ಕೆಇಬಿ ಕೊಟ್ರೇಶ್, ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ ಇನ್ನಿತರರಿದ್ದರು.