ಮಲೇಬೆನ್ನೂರು, ಜು.12- ಇಲ್ಲಿನ ಆಶ್ರಯ ಕಾಲೋನಿ ಹಿಂಭಾಗದಲ್ಲಿರುವ ಗುಡ್ಡದ ಜಮೀನುಗಳಲ್ಲಿ ಬೆಳೆಯಲಾಗಿರುವ ಮೆಕ್ಕೆಜೋಳದಲ್ಲಿ ಸೈನಿಕ ಹುಳುವಿನ ಹಾವಳಿ ಹೆಚ್ಚಾಗಿದೆ. ಪ್ರಾಥಮಿಕ ಹಂತದ ಹುಳುಗಳು ಎಲೆಯ ಮೇಲ್ಭಾಗವನ್ನು ಕೆರೆದು ತಿನ್ನುತ್ತಿವೆ. ಹುಳುಗಳು ಕೆರೆದ ಭಾಗವು ಬಿಳಿಯಾಗಿ ಕಾಣುತ್ತದೆ. ನಂತರ ಹುಳುಗಳು ಸುಳಿಯಲ್ಲಿ ಸೇರಿ ಚಿಗುರುತ್ತಿರುವ ಸುಳಿಯನ್ನು ತಿನ್ನುತ್ತವೆ ಎಂದು ರೈತ ಹಾಗೂ ಪುರಸಭೆ ಸದಸ್ಯ ಬಿ.ಸುರೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
December 24, 2024